ಯುವಕನ ಮೂಗಿನಲ್ಲಿತ್ತು 750 ಗ್ರಾಂ ತೂಕದ ಗಡ್ಡೆ!

ಬುಧವಾರ, 25 ಜನವರಿ 2017 (11:37 IST)
ನವದೆಹಲಿ:  ಕೆಲವರಿಗೆ ಎಂತೆಂತಹಾ ವಿಚಿತ್ರ ಖಾಯಿಲೆಗಳಿರುತ್ತವೆ ನೋಡಿ.  ಅಂತಹದ್ದೇ ವಿಚಿತ್ರ ಭಾರತದಲ್ಲೇ ನಡೆದಿದೆ. ಯುವಕನೊಬ್ಬನ ಮೂಗಿನಿಂದ ವೈದ್ಯರು 750 ಗ್ರಾಂ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದಿದ್ದಾರೆ!
 

ಇದೊಂದು ತೀರಾ ವಿರಳ ಪ್ರಕರಣವಾಗಿತ್ತು.  ಉತ್ತರ ಪ್ರದೇಶದ ಗ್ರಾಮವೊಂದರ 17 ವರ್ಷದ ಯುವಕನ ಮೂಗಿನೊಳಗೆ ಬೇಸ್ ಬಾಲ್ ಗಾತ್ರದ ಗಡ್ಡೆ ಬೆಳೆದಿತ್ತು. ಇದರಿಂದ ಆತನಿಗೆ ಉಸಿರಾಡುವುದೂ ಕಷ್ಟವಾಗಿತ್ತು. ದೆಹಲಿಯ ಲೋಕನಾಯಕ ಜೈಪ್ರಕಾಶ್ ನಾರಾಯಣ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಕ್ರಿಯೆ ನೆರವೇರಿಸಿದ್ದಾರೆ.

“ಸಾಮಾನ್ಯವಾಗಿ ಟ್ಯೂಮರ್ ಗಾತ್ರ ಹೆಚ್ಚೆಂದರೆ ಒಂದು ಟೆನಿಸ್ ಬಾಲ್ ಗಾತ್ರದಷ್ಟಿರಬಹುದು. ಆದರೆ ಈ ಯುವಕನ ಪ್ರಕರಣ ತೀರಾ ವಿರಳ. ಶಸ್ತ್ರ ಚಿಕಿತ್ಸೆಯ ನಂತರ ಇದರ ಗಾತ್ರ ನೋಡಿದಾಗ ಸುಮಾರು 750 ಗ್ರಾಂ ತೂಕವಿತ್ತು” ಎಂದು ವೈದ್ಯರು ತಿಳಿಸಿದ್ದಾರೆ.

ಶಸ್ತ್ರ ಚಿಕಿತ್ಸೆಯ ನಂತರ ಯುವಕನ ಸ್ಥಿತಿ ಸುಧಾರಿಸಿದೆ. ಸದ್ಯ ಆತ ಆರೋಗ್ಯದಿಂದ ಇದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಯುವಕರಲ್ಲಿ ಈ ರೋಗ ಸಾಮಾನ್ಯ.  ಆದರೆ ಇಷ್ಟು ದೊಡ್ಡ ಗಾತ್ರದ ಗಡ್ಡೆ ನಿಜಕ್ಕೂ ವೈದ್ಯ ಲೋಕಕ್ಕೆ ಅಚ್ಚರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ