ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ ತ್ವಚೆ ಕಾಂತಿಯುತವಾಗಿ ಕಾಣುತ್ತದೆಯೇ..?

ಸೋಮವಾರ, 2 ಆಗಸ್ಟ್ 2021 (21:29 IST)
ಬಹಳಷ್ಟು ಜನರು ತಮ್ಮ ತ್ವಚೆಯು ತುಂಬಾ ಕಾಂತಿಯುತವಾಗಿ ಕಾಣಲು ಏನು ಕಾರಣ ಎಂದು ಕೇಳಿದರೆ, ಅವರು ತಾವು ಸಾಕಷ್ಟು ನೀರನ್ನು ಕುಡಿಯುತ್ತೇವೆ ಎನ್ನುತ್ತಾರೆ. ಇದರಿಂದಾಗಿಯೇ ನಮ್ಮ ತ್ವಚೆಯಲ್ಲಿ ಇಷ್ಟೊಂದು ಹೊಳಪನ್ನು ಕಾಣಬಹುದು ಎಂದೂ ಹೇಳುವುದನ್ನು ನಾವು ಕೇಳಿರುತ್ತೇವೆ.

ಯಾವ ಬಾಲಿವುಡ್ ಸುಂದರ ನಟಿಯರಿಗೆ ಈ ಪ್ರಶ್ನೆ ಕೇಳಿದರೆ ಅವರು ಹೇಳುವುದೂ ಇದೆ. ನಮ್ಮ ತ್ವಚೆಯು ಕಾಂತಿಯುತವಾಗಿರಲು ಸಾಕಷ್ಟು ನೀರು ಕುಡಿಯುತ್ತೇವೆ ಎಂದು ಕಾರಣ ಕೊಡುತ್ತಾರೆ. ನಟಿ ಆಲಿಯಾ ಭಟ್ "ಚರ್ಮವು ಕಾಂತಿಯುತವಾಗಿದೆ ಎಂದರೆ ಅದರರ್ಥ ದೇಹದೊಳಗಡೆ ಎಲ್ಲವೂ ಚೆನ್ನಾಗಿದೆ ಎಂದು, ಅದಕ್ಕಾಗಿ ಸಾಕಷ್ಟು ನೀರನ್ನು ಕುಡಿಯಬೇಕು ಎನ್ನುವ ವಿಷಯವನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ" ಎಂದು 2015ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ನೆನಪಿರಲಿ ಅಗತ್ಯಕ್ಕಿಂತ ಹೆಚ್ಚಾಗಿ ನೀರು ಕುಡಿದರೂ ಅಪಾಯ ತಪ್ಪಿದ್ದಲ್ಲ.
ಬಾಲಿವುಡ್ ನಟಿ ಕರೀನಾ ಕಪೂರ್ ಸಹ ತಾನು ದಿನಕ್ಕೆ ಮೂರು ಲೀಟರ್ನಷ್ಟು ನೀರು ತಪ್ಪದೆ ಕುಡಿಯುತ್ತೇನೆ. ದಿನಕ್ಕೆ ಎಂಟು ಲೀಟರ್ನಷ್ಟು ನೀರು ಕುಡಿಯುವುದರಿಂದ ನೀವು ನಯವಾದ ಚರ್ಮ ಹೊಂದಬಹುದು ಎಂದು 2018ರಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದರು.
ದಿನದಲ್ಲಿ ಸಾಕಷ್ಟು ನೀರು ಕುಡಿಯುವುದರಿಂದ ನಿಜಕ್ಕೂ ನಾವು ನಯವಾದ ಹಾಗೂ ಕಾಂತಿಯುತವಾದ ಚರ್ಮವನ್ನು ಹೊಂದಬಹುದೇ? ತಜ್ಞರು ಇದರ ಬಗ್ಗೆ ಏನು ಹೇಳುತ್ತಾರೆ ಒಮ್ಮೆ ನೋಡಿ.
 ನೀರು ಕುಡಿಯುವುದರಿಂದ ನಿಮ್ಮ ಚರ್ಮವು ನಯವಾಗುತ್ತದೆಯೇ?
ನೀವು ನೀರು ಕುಡಿದಾಗ ಆ ನೀರು ನೇರವಾಗಿ ನಿಮ್ಮ ಚರ್ಮಕ್ಕೆ ಹೋಗುವುದಿಲ್ಲ. ನೀರು ನಿಮ್ಮ ದೇಹದಲ್ಲಿರುವ ರಕ್ತದಲ್ಲಿರುವಂತಹ ಕೋಶಗಳನ್ನು ಜಾಗ್ರತಗೊಳಿಸಿ ನಂತರ ಮೂತ್ರಪಿಂಡಗಳ ಮೂಲಕ ಶುದ್ದೀಕರಣವಾಗುತ್ತದೆ. ನೀರು ನಿಮ್ಮ ದೇಹದಲ್ಲಿರುವಂತಹ ಅನುಪಯುಕ್ತ ಪದಾರ್ಥಗಳನ್ನು ಹೊರಕ್ಕೆ ಹಾಕುವುದಕ್ಕೆ ಸಹಾಯ ಮಾಡಿ ದೇಹವನ್ನು ಉತ್ತಮ ಸ್ಥಿತಿಯಲ್ಲಿರಿಸುತ್ತದೆ ಎಂದು ಚರ್ಮ ವೈದ್ಯರಾದ ಡಾ. ವಿನು ಜಿಂದಾಲ್ ಹೇಳುತ್ತಾರೆ.
 ಅನೇಕ ಸಂಶೋಧನೆಗಳ ಪ್ರಕಾರ ನೀರು ನಿಜವಾಗಿಯೂ ನಿಮ್ಮ ಚರ್ಮಕ್ಕೆ ಉಪಯೋಗವಾಗದೆ ನಿಮ್ಮ ದೇಹದ ನಿರ್ಜಲೀಕರಣ ಹೋಗಲಾಡಿಸಲು ಹೆಚ್ಚು ಸಹಾಯಕವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ನೀರು ಅತಿ ಕಡಿಮೆ ಕುಡಿಯುವುದರಿಂದ ನಿಮ್ಮ ಚರ್ಮ ಗಡುಸಾಗಿ ಮತ್ತು ಮುಖದ ಮೇಲೆ ಮೊಡವೆಗಳು, ಕಲೆಗಳು ಮೂಡಬಹುದು. ಹೆಚ್ಚಾಗಿ ನೀರು ಕುಡಿಯುವುದರಿಂದ ಚರ್ಮದ ನಿರ್ಜಲೀಕರಣ ನಿವಾರಿಸಬಹುದಾಗಿದೆ. ಸೋರಿಯಾಸಿಸ್ನಿಂದ ಬಳಲುತ್ತಿರುವ ಜನರಲ್ಲಿ ಒಣಗಿದ ಚರ್ಮವು ನೀರು ಕಡಿಮೆ ಕುಡಿಯುವುದರಿಂದ ಇದು ಉಲ್ಭಣಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಿಮ್ಮ ಒಣಗಿದ ಚರ್ಮವನ್ನು ನಯವಾಗಿಸಿಕೊಳ್ಳುವುದು ಹೇಗೆ..?
ನೀವು ಒಣಗಿದ ಚರ್ಮವನ್ನು ಹೊಂದಿದ್ದರೆ, ನಿಮ್ಮ ದೇಹದಲ್ಲಿರುವ ಲಿಪಿಡ್ಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯು ತುಂಬಾ ದುರ್ಬಲವಾಗಿರುತ್ತದೆ. ಸಾಮಯಿಕ ಉತ್ಪನ್ನಗಳಿಂದ ನಿಮ್ಮ ದೇಹದ ನಿರ್ಜಲೀಕರಣ ನಿವಾರಿಸಬಹುದಾಗಿದೆ. ಗಾಳಿಯಿಂದ ತೇವಾಂಶವನ್ನು ಹೀರಿಕೊಂಡು ಮತ್ತು ನಂತರ ನಿಮ್ಮ ಚರ್ಮದ ತೇವಾಂಶ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಂತಹ ಸಾಮರ್ಥ್ಯ ಸುಧಾರಿಸಿಕೊಳ್ಳಲು. ನಿಮ್ಮ ದೇಹದಲ್ಲಿ ಇರುವಂತಹ ಕೋಶಗಳಿಗೆ ಸಾಕಷ್ಟು ನೀರು ತುಂಬಿಸುವುದರಿಂದ ಒಣಗಿದ ಚರ್ಮದಿಂದ ಮುಕ್ತಿ ಪಡೆಯಬಹುದು ಎಂದು ಚರ್ಮ ವೈದ್ಯ ಡಾ. ಪಂಕಜ್ ಚತುರ್ವೇದಿ ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ