ನಗರ ಪ್ರದೇಶಗಳಲ್ಲಿ ತಡವಾಗಿ ಮಗು ಬೇಕೆಂದು ಬಯಸಿ ಗರ್ಭ ಧರಿಸಿದ ಮಹಿಳೆಯರು ಅವಧಿಗೆ ಮುನ್ನವೇ ಮಗುವಿಗೆ ಜನನ ನೀಡುತ್ತಾರೆ. ಇದರ ಪರಿಣಾಮ ನವಜಾತ ಶಿಶುವಿನಲ್ಲಿ ಇನ್‍ಫೆಕ್ಷನ್ ಉಂಟಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಬೆಂಗಳೂರಿನಂತಹ ನಗರಗಳಲ್ಲಿ ತಡವಾಗಿ ಮದುವೆಯಾಗುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಇದರೊಟ್ಟಿಗೆ ಜನನ ಸಂಬಂಧಿ ಸಮಸ್ಯೆಗಳು ಮತ್ತು ಸಂಕೀರ್ಣತೆಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ತಡವಾಗಿ ಮದುವೆಯಾಗುವುದರಿಂದ ಗರ್ಭ ಧರಿಸುವುದೂ ತಡವಾಗುತ್ತದೆ. ಇದರಿಂದಾಗಿ ಅಕಾಲಿಕ ಅಂದರೆ, ಅವಧಿಗೆ ಮುನ್ನವೇ ಮಹಿಳೆ ಮಗುವಿಗೆ ಜನ್ಮ ನೀಡುತ್ತಾರೆ.
ಇದು ನಗರ ಪ್ರದೇಶಗಳನ್ನು ಕಾಡುತ್ತಿರುವ ಗಂಭೀರವಾದ ಆರೋಗ್ಯ ಆತಂಕವಾಗಿದೆ. ಮಹಿಳೆಯರು ತಡವಾಗಿ ಮದುವೆಯಾದರೂ ಗರ್ಭ ಧರಿಸಲು ಮತ್ತಷ್ಟು ತಡ ಮಾಡುತ್ತಾರೆ. ಇದರ ಪರಿಣಾಮ ಗರ್ಭದಾರಣೆ ಪ್ರಮಾಣ ಕುಸಿಯುತ್ತಾ ಹೋಗುತ್ತದೆ. ಇದು ದಂಪತಿಯನ್ನು ಕಂಗೆಡುವಂತೆ ಮಾಡುತ್ತದೆ.
ಮಗು ಬೇಕು ಎಂಬ ಹಪಹಪಿತನವಿದ್ದರೂ ತಾವು ಮಾಡಿಕೊಂಡ ತಪ್ಪಿಗೆ ಗರ್ಭ ಧರಿಸುವುದರಲ್ಲಿ ಏರುಪೇರುಂಟಾಗುತ್ತದೆ. ಹೀಗಾಗಿ ದಂಪತಿ ಇನ್-ವಿಟ್ರೋ ಫರ್ಟಿಲೈಸೇಶನ್ ಅಥವಾ ಐವಿಎಫ್‍ನಂತಹ ಚಿಕಿತ್ಸೆಗಳ ಮೂಲಕ ಮಗುವನ್ನು ಪಡೆಯಲು ಮುಂದಾಗುತ್ತಾರೆ. ಇಂತಹ ಚಿಕಿತ್ಸೆಗೆ ಅಸೆಸ್ಟೆಡ್ ರೀಪ್ರೊಡಕ್ಷನ್ ಎಂದು ಕರೆಯಲಾಗುತ್ತದೆ. ಆದರೆ, ಇಂತಹ ಚಿಕಿತ್ಸೆಯ ನಂತರವೂ ಅಕಾಲಿಕವಾಗಿ ಅಂದರೆ, ಅವಧಿಗೆ ಮುನ್ನವೇ ಮಗು ಜನಿಸುವ ಪ್ರಮಾಣವೂ ಹೆಚ್ಚಿದೆ.
ಕಳೆದ ಎರಡು ವರ್ಷಗಳಲ್ಲಿ ಹೀಗೆ ಅಸಿಸ್ಟೆಡ್ ರೀಪ್ರೊಡಕ್ಷನ್ ತಂತ್ರಜ್ಞಾನದಿಂದ ಗರ್ಭ ಧರಿಸುವ ಮಹಿಳೆಯರು ಅಕಾಲಿಕವಾಗಿ ಮಗುವಿಗೆ ಜನ್ಮ ನೀಡುವ ಪ್ರಮಾಣದಲ್ಲಿ ಶೇ. 10 ರಿಮದ 15 ರಷ್ಟು ಹೆಚ್ಚಳ ಕಂಡು ಬಂದಿದೆ. ಭಾರತದಲ್ಲಿ ಪ್ರತಿವರ್ಷ 2.7 ಕೋಟಿ ಮಕ್ಕಳು ಜನಿಸುತ್ತವೆ. ಈ ಪೈಕಿ ಸುಮಾರು 35 ಲಕ್ಷ ಮಕ್ಕಳು ಅವಧಿಪೂರ್ವದಲ್ಲಿ ಜನಿಸುತ್ತಿವೆ.
ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಮತ್ತು ಹಿರಿಯ ಕನ್ಸಲ್ಟೆಂಟ್ ಆಗಿರುವ ಡಾ.ಶುಭಾರಾಮ ರಾವ್ ಅವರು ಹೇಳುವಂತೆ, ``ತಡವಾಗಿ ಮದುವೆಯಾದರೆ ಗರ್ಭಧಾರಣೆ ವೇಳೆ ಸಾಕಷ್ಟು ಸಂಕೀರ್ಣ ಸಮಸ್ಯೆಗಳು ಉಂಟಾಗುತ್ತವೆ. ಇದರ ಪರಿಣಾಮ ಅವಧಿಪೂರ್ವ ಮಗು ಜನನವಾಗುತ್ತದೆ. ತಡವಾಗಿ ಮದುವೆಯಾದ ಕೆಲವು
ಮಹಿಳೆಯರಿಗೆ ನಾವು ಅಸಿಸ್ಟ್ ಇನ್ ಪ್ರಗ್ನೆನ್ಸಿ ನೀಡುತ್ತೇವೆ. ಬಹುತೇಕ ಪ್ರಕರಣಗಳಲ್ಲಿ ಮಹಿಳೆ ಅವಳಿ ಗರ್ಭ ಧರಿಸುವಂತಾಗುತ್ತದೆ. ತಾಯಿಯ ವಯಸ್ಸು ಹೆಚ್ಚಾಗಿರುವುದರಿಂದ ಒತ್ತಡ ಮತ್ತು ಮಧುಮೇಹಕ್ಕೆ ಗುರಿಯಾಗಬಹುದು. ಇದು ಅವಧಿಪೂರ್ವ ಹೆರಿಗೆಗೆ ಕಾರಣವಾಗಬಲ್ಲದು’’.
``ಹೆಚ್ಚು ವಯಸ್ಸಾದಂತೆಲ್ಲಾ ಗರ್ಭ ಧರಿಸುವ ಫಲವತ್ತತೆಯನ್ನು ಮಹಿಳೆ ಕಳೆದುಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೊದಲ ಮಗುವನ್ನು ಪಡೆಯುವ ಮಹಿಳೆಯರ ವಯಸ್ಸು ಅಧಿಕವಾಗಿರುತ್ತದೆ. ಇದು ಹಲವು ಅಪಾಯಗಳಿಗೆ ಮತ್ತು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಸರಾಸರಿ 35 ನೇ ವಯಸ್ಸಿಗೆ ಮಗುವನ್ನು ಪಡೆಯುವ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರಲ್ಲಿ ಪ್ರಸವ ಸಂಬಂಧಿತ ಗಂಭೀರ ಸಮಸ್ಯೆಗಳು ಕಾಡುತ್ತವೆ. ತಡವಾಗಿ ಮಗುವನ್ನು ಪಡೆಯುವವರ ಪ್ರಮಾಣ ನಗರ ಪ್ರದೇಶದಲ್ಲಿ ಸಾಮಾನ್ಯವಾದಂತಾಗಿದೆ. ಆದರೆ, ದಂಪತಿಯ ಈ ನಿರ್ಧಾರ ತಪ್ಪು’’ ಎನ್ನುತ್ತಾರೆ ಡಾ.ಶುಭಾ ರಾಮರಾವ್.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.