ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕೆ ಈ ರೀತಿ ರಸಂ ಮಾಡಿ ಸೇವಿಸಿ

Sampriya

ಗುರುವಾರ, 2 ಜನವರಿ 2025 (18:09 IST)
Photo Courtesy X
ಸದ್ಯ ಹವಾಮಾನ ತಂಪಾಗಿದ್ದು, ಈ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಯಾವುದೇ ಹಣ್ಣು ಅಥವಾ ತರಕಾರಿಗಳನ್ನು ತಿನ್ನುವಾಗ ಯೋಚಿಸಬೇಕಾಗುತ್ತದೆ.ಹೀಗಿರುವಾಗ ಈ ಸಮಯದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ದೇಹದವನ್ನು ಸಮತೋಲನದಲ್ಲಿ ಇಡುವಂತಹ ಒಂದು ಪದಾರ್ಥವನ್ನು ಮಾಡಿ ಸವಿಯಬಹುದು. ಇದು ವೈಟ್ ರೈಸ್ ಜತೆ ಸೂಪರ್ ಆಗಿರುತ್ತದೆ.  ಮಳೆಗಾಲದಲ್ಲಿ ಅಥವಾ ಚಳಿಗಾಲದ ಸಮಯದಲ್ಲಿ ರಸಂ ಉತ್ತಮವಾದ ಆಹಾರವಾಗಿದೆ.

ಇದನ್ನು ಕೆಲವೇ ನಿಮಿಷದಲ್ಲಿ ರುಚಿಕರವಾಗಿ ತಯಾರಿಸಬಹುದು.

ಬೇಕಾಗುವ ಸಾಮಾಗ್ರಿಗಳು: ‌

ಟೊಮೆಟೋ
ಈರುಳ್ಳಿ

ಬೆಳ್ಳುಳ್ಳಿ
ಕರಿಮೆಣಸು
ಶುಂಠಿ
ಸಾಸಿವೆ
ಕರಿಬೇವು
ಸ್ವಲ್ಪ ತುಪ್ಪ
ಹುಣಸೆ ರಸ
ಉಪ್ಪು

ಮಾಡುವ ವಿಧಾನ: ಮೊದಲಿಗೆ ನಾಲ್ಕೈದು ಬೆಳ್ಳುಳ್ಳಿ, ಒಂದು ತುಂಡು ಶುಂಠಿ ಹಾಗೂ ಒಂದೂವರೆ ಚಮಚ ಕಾಳುಮೆಣಸನ್ನು ಚೆನ್ನಾಗಿ ಜಜ್ಜಿ ಇಟ್ಟುಕೊಳ್ಳಿ.

ನಂತರ ಒಂದು ಬಾಣಲೆಗೆ ಎಣ್ಣೆ, ತುಪ್ಪ ಹಾಕಿ ಅದಕ್ಕೆ ಸ್ವಲ್ಪ ಸಾಸಿವೆ, ಉದ್ದಿನ ಕಾಳು, ಜೀರಿಗೆ, ಸ್ವಲ್ಪ ಬೆಳ್ಳುಳ್ಳಿ ಹಾಕಿ ಪ್ರೈ ಮಾಡಿ. ನಂತರ ಕರಿಬೇವು ಹಾಗೂ ಈರುಳ್ಳಿ ಹಾಕಿ ಪ್ರೈ ಮಾಡಿ. ಬಳಿಕ ಕಟ್ ಮಾಡಿದ ಟೊಮೆಟೋ ಹಾಕಿ ಎರಡು ನಿಮಿಷ ಪ್ರೈ ಮಾಡಿ. ನಂತರ ಅದಕ್ಕೆ ಜಜ್ಜಿ ಇಟ್ಟುಕೊಂಡ ಮಿಶ್ರಣ, ಉಪ್ಪು, ಅರಿಶಿಣ ಹಾಕಿ 2 ನಿಮಿಷ ಪ್ರೈ ಮಾಡಿ.

ನಂತರ ಬೇಕಾದಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ. ಸ್ಪಲ್ಪ ಕೊತ್ತಂಬರಿ ಸೊಪ್ಪು ಹಾಕಿ. ಇದೀಗ ರುಚಿಕರವಾದ ರಸಂ ಸವಿಯಲು ರೆಡಿ. ಇದನ್ನು ಆರೋಗ್ಯವನ್ನು ಶೀತದಿಂದ ಕಾಪಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ