ಯುವತಿಯರಲ್ಲಿ ಲೈಂಗಿಕಾಸಕ್ತಿ ಕಡಿಮೆ ಆಗದಂತೆ ಮಾಡೋದು ಹೇಗೆ?

ಗುರುವಾರ, 21 ಮಾರ್ಚ್ 2019 (20:07 IST)
ದಂಪತಿಗೆ ಲೈಂಗಿಕತೆಯ ಸಾಮರ್ಥ್ಯ  ಇದ್ದರೂ ಅದನ್ನು ಅನುಭವಿಸಲಾಗದೆ ಪರಿತಪಿಸುತ್ತಾರೆ. ಕೆಲಸದ ಒತ್ತಡ, ಮಾನಸಿಕ ಸಮಸ್ಯೆ ಇದೆಲ್ಲಾ ಅವರನ್ನು ಲೈಂಗಿಕ ಉತ್ತುಂಗದ ಸುಖದಿಂದ ವಂಚಿತರನ್ನಾಗಿಸುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಗಂಡು ಹೆಣ್ಣಿನಿಂದ ಸಾಕಷ್ಟು ಲೈಂಗಿಕ ಸುಖವನ್ನು ಪಡೆಯುತ್ತಾನಾದರೂ ಹೆಣ್ಣು ಮಾತ್ರ ಅದನ್ನು ಪಡೆಯದೆ ಅತೃಪ್ತಳಾಗಿಯೇ ಉಳಿದುಬಿಡಬೇಕಾಗುತ್ತದೆ

ಹಾಸಿಗೆಯಲ್ಲಿ ಗಂಡನಿಗೆ ಸುಖ ನೀಡುತ್ತೇನೋ ಇಲ್ಲವೋ ಎಂಬ ಆತಂಕ ಕೂಡ ದೈನಂದಿನ ಜೀವನದ ಮೇಲೆ ದುಷ್ಪರಿಣಾಮ ಬೀರಬಲ್ಲದು. ತನ್ನ ದೇಹ ಅಂದವಾಗಿದೆಯೇ ಇಲ್ಲವೆ ಎಂಬ ದುಗುಡ, ಸೂಕ್ತ ಸಮಯದಲ್ಲಿ ಸ್ಖಲನವಾಗುವುದೋ ಇಲ್ಲವೋ ಎಂಬ ಅವಿಶ್ವಾಸ ಮಹಿಳೆಯ ರಾತ್ರಿಯ ಸುಮಧುರ ಸಮಯವನ್ನು ಹಾಳುಗೆಡವಬಲ್ಲವು. ಹಾಸಿಗೆ ಸಂತೋಷವನ್ನು ಕಾಡುವ ಆತಂಕಗಳೇ ಹಾಳುಗೆಡವುತ್ತವೆ ಎಂಬುದು ಮನದಟ್ಟಾದರೆ ಲೈಂಗಿಕ ಅಭದ್ರತೆ ನಿವಾರಿಸಲು ಕೆಲ ಕ್ರಮಗಳನ್ನು ತೆಗೆದುಕೊಳ್ಳುವುದು ಮಹಿಳೆಯರಿಗೆ ಒಳಿತು.

ಇದು ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಸರ್ವೇಸಾಮಾನ್ಯವಾಗಿರುವ ತೊಂದರೆ ಎಂದರೆ ಕಾಮಕೇಳಿಯ ಉತ್ತುಂಗದ ಸ್ಥಿತಿಯಲ್ಲಿಯೂ ಸ್ಖಲಿಸುವುದಿಲ್ಲ. ಸ್ಖಲನದ ಕೊರತೆ ಅನುಭವಿಸುವುದು ಅಸಹಜವಾದುದೇನೂ ಅಲ್ಲ. ಸ್ಖಲಿಸದಿದ್ದರೂ ಸುಖಕ್ಕೇನೂ ತೊಂದರೆ ಇರುವುದಿಲ್ಲ ಎಂಬುದನ್ನು ತಿಳಿಯಬೇಕು. ಅಲ್ಲದೆ, ಕ್ಲೈಮ್ಯಾಕ್ಸ್ ಹಂತದಲ್ಲಿ ಸ್ಖಲನದ ಸುಖ ಪಡೆಯಲು ನಾನಾ ವಿಧಾನಗಳನ್ನು ರೂಢಿಸಿಕೊಳ್ಳಬೇಕು.

ಕೆಲವು ಮಹಿಳೆಯರ ದುಗುಡಕ್ಕೆ ಕಾರಣವೆಂದರೆ ಬೆತ್ತಲಾದಾಗ ತಾನು ಸುಂದರವಾಗಿ ಕಾಣುವುದಿಲ್ಲ ಎಂಬ ಭಯ ಕಾಡುತ್ತದೆ. ತನ್ನ ಬೊಜ್ಜು ಇರುವ ಹೊಟ್ಟೆ, ಅಗತ್ಯಕ್ಕಿಂತ ಹೆಚ್ಚು ತೆರೆದಿರುವ ಯೋನಿ ಇವೆಲ್ಲಾ ಆಕೆಯನ್ನು ಸುಖದಿಂದ ವಂಚಿತರನ್ನಾಗಿಸುತ್ತದೆ. ಯಾಕೆಂದರೆ ಪ್ರತೀ ಹೆಣ್ಣಿಗೂ ತನ್ನ ಯೋನಿ ಗಾತ್ರದ ಬಗ್ಗೆ ನಾನಾ ತರದ ಗೊಂದಲವಿರುತ್ತದೆ. ಆದರೆ ಬಗ್ಗೆ ಯುವತಿಯರು ತನ್ನ ಯೋನಿ ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ಕೂದಲಿರಲಿ ಅಥವಾ ಶೇವ್ ಮಾಡಿಕೊಂಡಿರಲಿ ಸುಖಪಡಲು ಅದರ ಗಾತ್ರ ಯಾವತ್ತೂ ಅಡ್ಡಿಯಾಗುವುದಿಲ್ಲ

ಕೆಲವು ಸ್ತ್ರೀಯರಿಗೆ ಪ್ರೇಮಸಲ್ಲಾಪ ಇಷ್ಟವಾಗುವುದಿಲ್ಲ. ಗಂಡನ ಪ್ರೇಮಸಲ್ಲಾಪ ಬೋರ್ ಹೊಡೆಸುತ್ತದೆ. ಸಂದರ್ಭದಲ್ಲಿ ಕಾಮಕೇಳಿಯನ್ನು ಮತ್ತಷ್ಟು ಆನಂದದಾಯಕ ಮಾಡಲು ನವನವೀನ ವಿಧಾನಗಳನ್ನು ನಾವೇ ಕಂಡುಕೊಳ್ಳಬೇಕು. ದೂರಕ್ಕೆ ಪಯಣಿಸಬೇಕು, ಸೆಕ್ಸ್ ಆಟಿಕೆಗಳನ್ನು ಬಳಸಬಹುದು, ಸಂಭೋಗಕ್ಕಿಂತ ಹೆಚ್ಚು ಸಲ್ಲಾಪದಲ್ಲಿ ತೊಡಗಬೇಕು. ಮತ್ತೆ ಮೂಡ್ ಬಂದಾಗ ಶುರುಹಚ್ಚಿಕೊಳ್ಳಬೇಕು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ