ಪ್ರೀತಿಸಿ ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡ್ರು…
ಮನೆಯವರ ವಿರೋಧ ಲೆಕ್ಕಿಸದೇ ಪ್ರೀತಿಸಿ ಮದುವೆಯಾದವ ಕೊನೆಗೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ಗೋರಿಪಾಳ್ಯದ ರಕ್ಷಿತಾ ಹಾಗೂ ಶೇಷಾದ್ರಿ ಪ್ರೀತಿಸಿ ಮದುವೆಯಾಗಿದ್ರು. ಆದರೆ ಮೇಲ್ಜಾತಿಗೆ ಸೇರಿದ ರಕ್ಷಿತಾ ಪೋಷಕರು ಇಬ್ಬರಿಗೂ ಕಿರುಕುಳ ನೀಡಿದ್ದಾರೆ. ಹೀಗಾಗಿ ಫೇಸ್ ಬುಕ್ ನಲ್ಲಿ ತಮ್ಮ ಕಷ್ಟವನ್ನು ಹೇಳಿಕೊಂಡು ಪ್ರೇಮಿಗಳು ಸಾವಿಗೆ ಶರಣಾಗಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.