ಇವಳ ಜತೆ ಮಲಗಿದ್ದಾಗಲೂ ಅವಳದ್ದೇ ನೆನಪು ಕಾಡುತ್ತಿದೆ…

ಸೋಮವಾರ, 6 ಮೇ 2019 (19:15 IST)
ಪ್ರಶ್ನೆ: ಸರ್, ನನಗೆ ಈಗ 28 ವರ್ಷ. ನಾನು ಪಿಯುನಿಂದ ಪಿಜಿವರೆಗೆ ಓದುತ್ತಿರುವಾಗ ಸಹಪಾಠಿಯನ್ನು ತುಂಬಾ ಪ್ರೀತಿ ಮಾಡಿದ್ದೆ. ಅವಳು ನನ್ನನ್ನು ತುಂಬಾ ಪ್ರೀತಿಮಾಡುತ್ತಿದ್ದಳು. ನಾವಿಬ್ಬರೂ ಏಳೆಂಟು ವರ್ಷ ಜೋಡಿ ಹಕ್ಕಿಯಾಗಿದ್ದೆವು.

ನಾವಿಬ್ಬರೂ ಸಾಕಷ್ಟು ಸಲ ರತಿಸುಖ ಅನುಭವಿಸಿದ್ದೇವೆ. ಅವಳನ್ನೇ ಮದುವೆಯಾಗಬೇಕು ಅಂತ ಅಂದುಕೊಂಡಿದ್ದೆ. ಆದರೆ ಅವಳ ಮನೆಯಲ್ಲಿ ಬೇರೆಯವರ ಜತೆಮದುವೆ ಮಾಡಿಬಿಟ್ರು. ನಮ್ಮ ಮನೆಯವರ ಒತ್ತಾಯಕ್ಕೆ ನಾನೂ ಕೂಡ ಬೇರೆ ಹುಡುಗಿಯನ್ನು ಮದುವೆಯಾಗಿರುವೆ.

ಆದರೆ ಪ್ರತಿದಿನ ರಾತ್ರಿ ವೇಳೆ ನಾನು ನನ್ನ ಪತ್ನಿ ಜತೆ ಸಮ್ಮಿಲನ ನಡೆಸೋವಾಗ ನನಗೆ ನನ್ನ ಮೊದಲಿನ ಪ್ರೇಯಸಿಯ ನೆನಪೇ ಕಾಡುತ್ತಿದೆ. ಅವಳಿಂದ ಸಿಕ್ಕ ಸುಖ, ಪತ್ನಿಯಿಂದ ಸಿಗುತ್ತಿಲ್ಲ ಎಂಬ ಭಾವ ಕಾಡುತ್ತಿದೆ. ನನಗೆ ಹಗಲು, ರಾತ್ರಿ ನನ್ನೆ ಮೊದಲನೇ ಪ್ರೇಯಸಿಯೇ ನೆನಪಾಗುತ್ತಿದ್ದಾಳೆ. ನನ್ನ ಪತ್ನಿಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ.

ಉತ್ತರ: ಪ್ರೀತಿ ಮಾಡೋವಾಗ ಇಬ್ಬರಿಗೂ ಎಚ್ಚರಿಕೆ ಅಗತ್ಯ. ಪ್ರೇಮಕಾಲದಲ್ಲಿ ತೋರುವ ಧೈರ್ಯ ಮದುವೆ ಹಂತದಲ್ಲಿ ಮುರಿದುಬೀಳುವುದೇ ಹೆಚ್ಚು. ಹೀಗಾಗಿ ಪ್ರೀತಿ ಮಾಡುವಾಗಲೇ ಲೈಂಗಿಕವಾಗಿ ಸಂಪರ್ಕ ಹೊಂದಬಾರದು ಎಂಬ ಅರಿವಿರಬೇಕು.

ಈಗ ನಿಮ್ಮ ಪ್ರೇಯಸಿ ಹಾಗೂ ನೀವು ಬೇರೆ ಬೇರೆ ಮದುವೆಯಾಗಿದ್ದೀರಿ. ಹೀಗಾಗಿ ನೀವು ಅವಳನ್ನು ಮರೆತು ನಿಮ್ಮ ಪತ್ನಿ ಜತೆ ಸಂಸಾರ ನಡೆಸುವುದು ಉತ್ತಮ. ಪ್ರೇಯಸಿಯ ನೆನಪು ಬರದಂತೆ ನೋಡಿಕೊಳ್ಳಿ.

ನಿಮ್ಮನ್ನೇ ನಂಬಿರುವ ಪತ್ನಿಗೆ ಜೀವನಪೂರ್ಣ ಸುಖವಾಗಿ ನೋಡಿಕೊಳ್ಳುವ ಕೆಲಸ ನಿಮ್ಮದೇ ಎನ್ನುವುದು ಮರೆಯದಿರಿ. ನಿಮ್ಮ ಪತ್ನಿಗೆ ಅವರದ್ದಲ್ಲದ ತಪ್ಪಿಗೆ ಯಾವ ರೀತಿಯ ನೋವು, ಶಿಕ್ಷೆ ಕೊಡುವುದು ಸರಿಯಲ್ಲ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ