ಬಕ್ರೀದ್ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷವಾಗಿ ಶುಭಾಶಯ ತಿಳಿಸಿ

ಗುರುವಾರ, 29 ಜೂನ್ 2023 (06:31 IST)
ಬಕ್ರೀದ್ ಅಥವಾ ಈದ್ ಉಲ್ ಅಧಾ 'ತ್ಯಾಗದ ಹಬ್ಬ'. ಇದು ಇಸ್ಲಾಮಿಕ್ ಸಮುದಾಯವು ಆಚರಿಸುವ ಎರಡನೇ ಪ್ರಮುಖ ಹಬ್ಬವಾಗಿದೆ. ಈ ವರ್ಷ, ಭಾರತದಲ್ಲಿ ಈದ್ ಉಲ್ ಅಧಾ ಜೂನ್ 29 ರಂದು ಆಚರಿಸಲಾಗುತ್ತದೆ.
 
ಈ ದಿನವನ್ನು ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗನ ತ್ಯಾಗವನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಈದ್ ಉಲ್ ಅಧಾವನ್ನು ಆಚರಿಸಲಾಗುತ್ತದೆ. ಪ್ರವಾದಿಯವರು ತಮ್ಮ ಮಗನ ತಲೆಯನ್ನು ಅಲ್ಲಾಹುನಿಗೆ ಅರ್ಪಿಸಿದಾಗ, ಅಲ್ಲಾ ಅವರ ಭಕ್ತಿಗೆ ಮೆಚ್ಚಿ ಅದರ ಪ್ರತಿಫಲವಾಗಿ ಆ ಮಗುವಿನ ತಲೆಯ ಬದಲು ಕುರಿಮರಿಯ ತಲೆಯನ್ನಾಗಿ ಪರಿವರ್ತಿಸಿದರು. ಅದಕ್ಕಾಗಿಯೇ ಬಕ್ರೀದ್ ಹಬ್ಬದಂದು ಮುಸ್ಲಿಂ ಕುಟುಂಬಗಳು ಗಂಡು ಮೇಕೆಯನ್ನು ದೇವರಿಗೆ ಬಲಿ ನೀಡುವ ಮೂಲಕ ಆಚರಣೆ ಮಾಡಲಾಗುತ್ತದೆ.

ಈ ಹಬ್ಬವನ್ನು ಆಚರಿಸುವ ಜನರು ಹೊಸ ಬಟ್ಟೆಗಳನ್ನು ಧರಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಈ ಸಂತೋಷದ ದಿನದಂದು ಉಡುಗೊರೆಗಳು ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿದಂತೆ ಶುಭಾಶಯಗಳು, ಕೋಟ್ಸ್ ಮತ್ತು ಚಿತ್ರಗಳು ಇಲ್ಲಿವೆ. ಈ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಬಕ್ರೀದ್ ಶುಭಾಶಯ ತಿಳಿಸಬಹುದು.

ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಹಬ್ಬವು ನಾಡಿನಲ್ಲಿ ಸ್ನೇಹ-ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡಲಿ. ಬಕ್ರೀದ್ ಹಬ್ಬದ ಶುಭಾಶಯಗಳು.

ಪ್ರತಿಯೊಂದು ಹಂತದಲ್ಲೂ ನಿಮಗೆ ಸಹಾಯ ಮಾಡಲು ಅಲ್ಲಾಹನು ಯಾವಾಗಲೂ ನಿಮ್ಮೊಂದಿಗಿದ್ದಾನೆ ಎಂದು ತಿಳಿಯಿರಿ. ಆತ ನಿಮಗೆ ಸರ್ವವನ್ನೂ ಕರುಣಿಸಲಿ. ಬಕ್ರೀದ್ ಹಬ್ಬದ ಶುಭಾಶಯಗಳು.

ಒತ್ತಡದಲ್ಲಿ ಜೀವಿಸುವುದನ್ನು ಬಿಟ್ಟು ವಿರಾಮ ತೆಗೆದುಕೊಳ್ಳಿ ಮತ್ತು ಈದ್ ಆಚರಿಸಿ! ನಮ್ಮೊಂದಿಗೆ ಸೇರಲು ನಿಮಗೆ ಸ್ವಾಗತವಿದೆ. ಜೀವನವು ಅಂತ್ಯವಿಲ್ಲದಷ್ಟು ರುಚಿಕರವಾಗಿದೆ. ಹ್ಯಾಪಿ ಈದ್ ಡೇ!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ