2 ನೇ ಪತ್ನಿಯೂ ರಾತ್ರಿಯಾದರೆ ಅದನ್ನೇ ಮಾಡುತ್ತಿದ್ದಾಳೆ... ಏನು ಮಾಡಲಿ

ಶನಿವಾರ, 11 ಮೇ 2019 (13:42 IST)
ಪ್ರಶ್ನೆ: ಸರ್, ನಾನು ಹಗಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ರಾತ್ರಿಯೂ ಮತ್ತಷ್ಟು ಬೇರೆಯದೇ ಚಿಂತೆಗೆ ಒಳಗಾಗುತ್ತಿದ್ದೇನೆ. ನಾಲ್ಕು ವರ್ಷದ ಹಿಂದೆ ಮೊದಲ ಮದುವೆಯಾಗಿದ್ದೆ. ಆದರೆ ಅವಳು ನನ್ನೊಂದಿಗೆ ಸರಿಯಾಗಿ ಎರಡು ವರ್ಷವೂ ಸಂಸಾರ ನಡೆಸಲಿಲ್ಲ.

ರಾತ್ರಿಯಾದರೆ ಸಾಕು ಏನಾದರೊಂದು ಕಾರಣ ನೀಡಿ ದೂರ ಇರುತ್ತಿದ್ದಳು. ಇದರಿಂದ ಬೇಸತ್ತು. ಆಕೆಯನ್ನು ಬಿಟ್ಟೆ. ಈಗ ಎರಡನೇ ಮದುವೆಯಾಗಿ ಒಂದು ವರ್ಷವಾಗುತ್ತಿದೆ. ಆದರೆ ಎರಡನೇ ಪತ್ನಿಯಿಂದಲೂ ರಾತ್ರಿಯ ಸುಖ ಬೇಕಾದಷ್ಟು ಸಿಗುತ್ತಿಲ್ಲ. ನನ್ನ ಇಚ್ಛೆಗೆ ತಕ್ಕಂತೆ ಪತ್ನಿ ಹಾಸಿಗೆಯಲ್ಲಿ ನಡೆದುಕೊಳ್ಳುತ್ತಿಲ್ಲ. ಮುಂದೇನು ಮಾಡಬೇಕು. ಪರಿಹಾರ ತಿಳಿಸಿ.

ಉತ್ತರ: ಜೀವನ ಎನ್ನುವುದು ಹಾಗೂ ಸ್ತ್ರೀ ಎನ್ನುವುದು ಸುಖದ ಗಣಿ ಮಾತ್ರವಲ್ಲ. ಅವರಿಗೂ ಮನಸ್ಸು, ಜೀವನ, ದುಃಖ, ಸುಖ, ಬೇಕು ಬೇಡಗಳಿರುತ್ತವೆ ಎಂಬುದನ್ನು ಮೊದಲಿಗೆ ಅರ್ಥ ಮಾಡಿಕೊಳ್ಳಿ. ಪುಟ್ಟ ಮಕ್ಕಳು ಪ್ರೀತಿಯಿಂದ ನಾವು ಮಾತನಾಡಿಸಿದಾಗ ಮಾತ್ರ ನಮ್ಮಹತ್ತಿರ ಬರುತ್ತವೆ. ಹಾಗೇ ಪ್ರೀತಿಸುವ ಪತ್ನಿಯರಿಗೂ ನಾವು ಗೌರವ, ಪ್ರೇಮದಿಂದ ನೋಡಿಕೊಳ್ಳಬೇಕು.

ಅವರೊಂದಿಗಿನ ಮಾತು, ಕಥೆ, ಸರಸ, ಆಟ, ಸುತ್ತಾಟ ಇವು ಪರಸ್ಪರ ಹತ್ತಿರಕ್ಕೆ ತರಬಲ್ಲವು. ಪ್ರೀತಿಯನ್ನು ಕೊಟ್ಟು ಪ್ರೀತಿ ಪಡೆದುಕೊಂಡಾಗಲೇ ಜೀವನ ಸುಂದರವಾಗುತ್ತದೆ. ಪ್ರೀತಿಯಿಲ್ಲದೇ ಕೇವಲ ಹಾಸಿಗೆ ಸುಖ ಅರಸಿದರೆ ಅದೂ ಸಿಗುವುದು ವಿರಳ. ನಿಮಗೆ ನೋವು ಕಟ್ಟಿಟ್ಟ ಬುತ್ತಿ. ಹೆಣ್ಣಿನ ಮನಸ್ಸು ಅರಿತು ಮುಂದುವರಿಯಿರಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ