ಆರೋಗ್ಯಕ್ಕೆ ಹಿತಕರ ಈ ಅಲೋವೇರಾ...!

ಶುಕ್ರವಾರ, 20 ಜುಲೈ 2018 (17:52 IST)
ಕೆಲವೊಮ್ಮೆ ಹಿರಿಯರು ಹೇಳಿದ "ಹಿತ್ತಲ ಗಿಡ ಮದ್ದಲ್ಲ" ಎನ್ನುವುದು ಎಷ್ಟು ನಿಜ ಅಂತ ಅನ್ನಿಸುತ್ತೆ ಅಲ್ವೇ... ನಮ್ಮ ಹಿತ್ತಲಲ್ಲಿ ಬೆಳೆಯುವ ಸಣ್ಣ ಸಣ್ಣ ಗಿಡಗಳೂ ಸಹ ಎಷ್ಟೋ ದೊಡ್ಡ ದೊಡ್ಡ ರೋಗಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿರುತ್ತದೆ. ಅಂತಹ ಒಂದು ಗುಣಗಳನ್ನು ಹೊಂದಿರುವ ಸಸ್ಯಪ್ರಭೇಧಗಳಲ್ಲಿ ಅಲೋವೇರಾ ಕೂಡಾ ಒಂದು.

ಹಸಿರು ಬಣ್ಣದಿಂದ ನಳನಳಿಸುವ ಈ ಅಲೋವೇರಾದಿಂದ ದೇಹದ ಆರೋಗ್ಯಕ್ಕೆ ಎಷ್ಟು ಲಾಭಗಳಿವೆಯೋ ಅಷ್ಟೇ ಸೌಂದರ್ಯವನ್ನು ಕಾಪಾಡಲೂ ಸಹ ಸಹಕಾರಿಯಾಗಿದೆ. ಹಾಗಾದರೆ ಅಲೋವೇರಾದಿಂದ ಏನೆಲ್ಲಾ ಪ್ರಯೋಜನಗಳಿರಬಹುದು ಅನ್ನೋ ಕೂತುಹಲವೇ ನಿಮ್ಮಲ್ಲಿ ಕಾಡುತ್ತಿದೆಯೇ ಇಲ್ಲಿದೆ ವರದಿ...!
 
* ಅಲೋವೇರಾದಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿರುವ ವಿಷವನ್ನು ಹೊರಹಾಕುವುದರ ಜೊತೆಗೆ ದೇಹದಲ್ಲಿರುವ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಸರಿಪಡಿಸುತ್ತದೆ
 
* ಅಲೋವೇರಾಗಳು ಎದೆಯುರಿ ನಿವಾರಣೆಗೆ, ಅಜೀರ್ಣದಿಂದ ಉಂಟಾದ ಅಸ್ವಸ್ಥತೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ
* ಅಲೋವೇರಾವನ್ನು ಹೆಚ್ಚಾಗಿ ಮಲಬದ್ಧತೆಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ
 
* ಅಲೋವೇರಾವು ಚರ್ಮವನ್ನು ಸುಧಾರಿಸಲು ಮತ್ತು ಸುಕ್ಕುಗಳನ್ನು ತಡೆಗಟ್ಟಲು ಪ್ರಯೋಜನಕಾರಿ ಆಗಿದೆ ಎಂಬ ಅಂಶವು ಸುಮಾರು 45 ವರ್ಷಕ್ಕಿಂತ ಮೇಲ್ಪಟ್ಟ 30 ಮಹಿಳೆಯರ ಮೇಲೆ ನಡೆಸಿದ ಪ್ರಯೋಗದಿಂದ ತಿಳಿದುಬಂದಿದೆ.
 
* ಚಿಟಿಕೆ ಅರಿಶಿನ, ಒಂದು ಚಮಚ ಜೇನು, ಒಂದು ಚಮಚ ಹಾಲು, ರೋಸ್ ವಾಟರ್‌ನ ಹನಿಗಳನ್ನು ಅಲೋವೇರಾ ಪೇಸ್ಟ್‌ಗೆ ಬೆರೆಸಿ, ಮೈಗೆ ಹಚ್ಚಿಕೊಂಡರೆ ಶುಷ್ಕ ಚರ್ಮ ಸಮಸ್ಯೆ ನಿವಾರರಿಸಬಹುದು
 
* ಅಲೋವೇರಾವು ನೈಸರ್ಗಿಕವಾಗಿ ಪೊಟ್ಯಾಸಿಯಂ ಹೊಂದಿರುವುದರಿಂದ ಇದನ್ನು ನಿರ್ಜಲೀಕರಣದ ಚಿಕಿತ್ಸೆಯಲ್ಲಿ ಬಳಸುತ್ತಾರೆ.
 
* ಅಲೋವೇರಾವು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಎಂದು ಅಂಶ ಮಾನವ ಮತ್ತು ಪ್ರಾಣಿಗಳಲ್ಲಿ ನಡೆಸಲಾದ ಅಧ್ಯಯನಗಳಿಂದ ದೃಢಪಟ್ಟಿದೆ
 
* ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಮತ್ತು ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಅಲೋವೇರಾ ಜೆಲ್ ಬಳಸುತ್ತಾರೆ
* ಅಲೋವೇರಾವನ್ನು ತಲೆಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ
 
* ಅಲೋವೇರಾ ರಸವನ್ನು ದಿನಕ್ಕೆ 30 ಮಿಲೀ ಕುಡಿಯುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆಯಾಗುತ್ತದೆ
 
* ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸುವಲ್ಲಿ ಅಲೋವೇರಾವು ಸಹಕಾರಿಯಾಗಿದೆ.
 
* ಅಲೋವೇರಾ ಜ್ಯೂಸ್‌ನಲ್ಲಿ ಅಧಿಕ ಪ್ರಮಾಣದ ಅಮೀನೋ ಆಸಿಡ್  ಮತ್ತು ಫ್ಯಾಟಿ ಆಸಿಡ್ ಇದ್ದು, ಆರೋಗ್ಯದ ಮೇಲೆ ಇದು ಒಳ್ಳೆಯ ಪರಿಣಾಮ ಬೀರುತ್ತದೆ.
 
* ಅಲೋವೇರಾದಲ್ಲಿರುವ ಪ್ರೋಟಿಯೋಲಿಟಿಕ್ ಅಂಶವು ಕೂದಲು ಉದುರುವುದನ್ನು ತಡೆಯುತ್ತದೆ ಹಾಗೂ ವಾರಕ್ಕೊಮ್ಮೆ ಕೂದಲಿಗೆ ಅಲೋವೇರಾ ಜೆಲ್ ಬಳಸಿದರೆ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ ಮತ್ತು ಅಲೋವೇರಾವು ಕೂದಲಿಗೆ ನುಣುಪನ್ನು ತಂದುಕೊಡುತ್ತದೆ
 
   ಇಷ್ಟೆಲ್ಲ ಪ್ರಯೋಜನವಿರುವ ಈ ಅಲೋವೇರಾವನ್ನು ನಮ್ಮ ಮನೆಯ ಅಂಗಳದಲ್ಲೂ ಬೆಳೆಸಿಕೊಂಡು ಉತ್ತಮವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಆದರೆ ಯಾವುದೇ ಚರ್ಮದ ಸಮಸ್ಯೆ ಆಗಲಿ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ