ನೀವು ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕೆ.....?

ಬುಧವಾರ, 18 ಜುಲೈ 2018 (12:59 IST)
ತೆಳ್ಳಗಾಗುವುದು ಎಷ್ಟು ಕಷ್ಟವೋ ಹಾಗೇ ದಪ್ಪಗಾಗುವುದು ಕೂಡಾ ಕಷ್ಟ. ದಿನನಿತ್ಯ ಬಹಳಷ್ಟು ಜನರು ತೂಕವನ್ನು ಕಳೆದುಕೊಳ್ಳುವ ಬಗ್ಗೆ ಮಾತನಾಡುವುದನ್ನು ನಾವು ಕೇಳುತ್ತೇವೆ. ಆದರೆ ಕಡಿಮೆ ತೂಕದಿಂದ ಬಹಳ ತೊಂದರೆಗಳನ್ನು ಅನುಭವಿಸಿ, ಇದರಿಂದ ಮುಕ್ತಿ ಪಡೆದು ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿರುವ ಜನರೂ ಸಹ ಇದ್ದಾರೆ. ಮಾರುಕಟ್ಟೆಯಲ್ಲಿ ತೂಕ ಹೆಚ್ಚಿಸಿಕೊಳ್ಳಲು ಕೆಲವು ದುಬಾರಿ ಉತ್ಪನ್ನಗಳೂ ಸಹ ಲಭ್ಯವಿದೆ.

ಅದರೆ ಬಹಳ ಮುಖ್ಯವಾಗಿ ನೈಸರ್ಗಿಕವಾಗಿ, ಯಾವುದೇ ಅಡ್ಡ ಪರಿಣಾಮವಿಲ್ಲದೇ ತೂಕವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಕೆಲವರು ದಪ್ಪಗಾಗಲು ಮಾತ್ರೆಗಳು, ಜಂಕ್ ಫುಡ್‌ಗಳ ಮೊರೆ ಹೋಗುತ್ತಾರೆ. ಅದರೆ ಅದೆಲ್ಲವನ್ನು ಬಿಟ್ಟು ನಾವು ನಮ್ಮ ಆಹಾರದಲ್ಲಿ ಕೆಲವು ಪದಾರ್ಥಗಳು, ಹಣ್ಣು-ತರಕಾರಿಗಳನ್ನು ಬಳಸುವುದರಿಂದ ನಾವು ಸುಲಭವಾಗಿ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹೇಗೆ ಅಂತೀರಾ ಇಲ್ಲಿದೆ ವರದಿ.
 
* ಕಾರ್ಬೋಹೈಡ್ರೇಟ್ ಇರುವ ಆಹಾರ ಪದಾರ್ಥಗಳು: ಕಾರ್ಬೋಹೈಡ್ರೇಟ್‌ಗೆ ಒಂದು ಒಳ್ಳೆಯ ಉದಾಹರಣೆ ಎಂದರೆ ಅನ್ನ. ಅನ್ನ ತಿಂದರೆ ದೇಹದ ತೂಕ ಹೆಚ್ಚಾಗುತ್ತದೆ. ಅದರಲ್ಲೂ ಆರೋಗ್ಯದ ದೃಷ್ಟಿಯಿಂದ ಕೆಂಪಕ್ಕಿ ಅನ್ನ ಮತ್ತು ಬ್ರೌನ್ ರೈಸ್ ತಿಂದರೆ ಮತ್ತಷ್ಟು ಒಳ್ಳೆಯದು.
 
* ಪ್ರತಿದಿನ ಕಡ್ಲೆಬೀಜವನ್ನು ರಾತ್ರಿ ನೆನಸಿ ಬೆಳಿಗ್ಗೆ ತಿನ್ನಬೇಕು. ಸತತವಾಗಿ 1 ತಿಂಗಳು ತಿನ್ನುವುದರಿಂದ ಶರೀರದ ತೂಕ ಹೆಚ್ಚಾಗುವುದು.
 
* ಮೊಟ್ಟೆಗಳು: ಮೊಟ್ಟೆಯಲ್ಲಿ ಅಮೈನೋ ಆಮ್ಲದ ಸಾಂದ್ರತೆ ಹೆಚ್ಚಿರುತ್ತದೆ ಅಲ್ಲದೇ ಮೊಟ್ಟೆಯ ಹಳದಿ ಭಾಗದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿರುವುದರಿಂದ ಇದು ದೇಹದ ಕ್ಯಾಲೋರಿ ಕೂಡಾ ಹೆಚ್ಚಿಸುತ್ತದೆ. ದಿನಕ್ಕೆ 2 ಮೊಟ್ಟೆ ತಿಂದರೆ ತೂಕ ಹೆಚ್ಚುತ್ತದೆ.
 
* ಪ್ರತಿದಿನ ತೆಂಗಿನಕಾಯಿ ತುರಿಗೆ ಒಣದ್ರಾಕ್ಷಿ ಸೇರಿಸಿ ತಿನ್ನುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
 
* ಚೀಸ್: ಸಂಪೂರ್ಣ ಹಾಲಿನ ಕೆನೆಯಿಂದ ಮಾಡಿದ ಚೀಸ್ ಅನ್ನು ಪ್ರತಿದಿನ ತಿನ್ನುವುದರಿಂದ ತೂಕ ಜಾಸ್ತಿಯಾಗುತ್ತದೆ. ಇದರಲ್ಲಿರುವ ಪ್ರೋಟೀನ್ ಕೂಡಾ ಆರೋಗ್ಯಕ್ಕೆ ಅತಿ ಅವಶ್ಯಕವಾಗಿದೆ.
 
* ಸೀಗಡಿ ಮತ್ತು ಸಾಲ್ಮನ್ ಮೀನುಗಳು: ಈ ಮೀನುಗಳಲ್ಲಿ ಅಗತ್ಯವಾದ ಪೋಷಕಾಂಶಗಳು, ಆರೋಗ್ಯಕ್ಕೆ ಬೇಕಾದ ಕ್ಯಾಲೋರಿಗಳು ಮತ್ತು ಪ್ರೋಟೀನ್‌ಗಳು ಇರುತ್ತವೆ. ಇದು ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
 
* ರಾತ್ರಿ ಊಟವನ್ನು ಆದಷ್ಚು ತಡವಾಗಿ ಮಾಡುವುದರಿಂದ ನಿಮ್ಮ ದೇಹಕ್ಕೆ ಯಾವುದೇ ಶಕ್ತಿ ನಷ್ಟವಾಗದೇ ರಾತ್ರಿಯ ಆಹಾರವು ಪೂರ್ತಿಯಾಗಿ ಕೊಬ್ಬಾಗಿ ಪರಿವರ್ತಿತವಾಗುತ್ತದೆ. 
 
* ಮೊಸರು: ಮೊಸರಿನಲ್ಲಿ ಕೊಬ್ಬಿನ ಅಂಶವಿರುತ್ತದೆ. ಇದು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. 
 
* ಸಂಸ್ಕರಿತ ಆಹಾರಗಳಿಂದ ದೂರವಿರಿ : ಸಂಸ್ಕರಿತ ಆಹಾರಗಳಿಂದ ತೂಕ ಹೆಚ್ಚಾಗುವುದೆಂಬ ನಂಬಿಕೆಯು ಹಲವು ಜನರಲ್ಲಿದೆ. ಅದರೆ ಸಂಸ್ಕರಿತ ಆಹಾರಗಳು ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಕೊಬ್ಬಾಗಿ ಪರಿವರ್ತಿಸಿ ದೇಹದಲ್ಲಿ ಶೇಖರಿಸುತ್ತದೆ. ಇದರಿಂದ ಹೃದಯ ಸಂಬಂಧಿ ಖಾಯಿಲೆಗಳು ಬರುವ ಸಂಭವವಿರುತ್ತದೆ. ಹಾಗಾಗಿ ಇಂತಹ ಆಹಾರಗಳಿಂದ ದೂರವಿರಿ.
 
* ಬ್ರೆಡ್‌ಗಳು: ಗೋಧಿಯಿಂದ ಮಾಡಿದ ಬ್ರೆಡ್‌ನಲ್ಲಿ 13 ರಷ್ಟು ಕ್ಯಾಲೋರಿ ಇರುತ್ತದೆ. ಇದರಿಂದ ದೇಹದ ತೂಕ ಜಾಸ್ತಿಯಾಗುತ್ತದೆ.
 
* ಬೀನ್ಸ್: ಬೀನ್ಸ್ ಅನ್ನು ಸಾಸ್‌ನೊಂದಿಗೆ ಬೇಯಿಸಿದಾಗ ಇದರಲ್ಲಿ 300 ರಷ್ಟು ಕ್ಯಾಲೋರಿ ಇರುತ್ತದೆ. ಇದು ಕೇವಲ ಪೋಷಕಾಂಶವನ್ನು ಒಳಗೊಂಡ ಆಹಾರ ಮಾತ್ರವಲ್ಲ, ಸುಲಭವಾಗಿ ತೂಕವನ್ನು ಹೆಚ್ಚಿಸಿಕೊಳ್ಳಲೂ ಸಹ ಸಹಾಯಕವಾಗುತ್ತದೆ.
 
* ಬೆಣ್ಣೆಹಣ್ಣು: ಈ ಹಣ್ಣನ್ನು ಸೂಪ್, ಸಲಾಡ್‌ಗಳಲ್ಲಿ ಬಳಸಬಹುದು. ಆರೋಗ್ಯಕರ ಪೋಷಕಾಂಶಗಳು ಮತ್ತು ಅಗತ್ಯ ಕೊಬ್ಬುಗಳನ್ನು ಹೊಂದಿದ ಇದು ಆರೋಗ್ಯಯುತವಾಗಿ ದೇಹದ ತೂಕವನ್ನು ಹೆಚ್ಚಿಸುವಲ್ಲಿ ಸಹಾಯಕಾರಿಯಾಗಿದೆ.
 
* ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯಲ್ಲಿ ಪ್ರೋಟೀನ್ ಮತ್ತು ಅಗತ್ಯ ಕೊಬ್ಬಿನ ಅಂಶಗಳಿರುತ್ತವೆ. ಆಲಿವ್ ಎಣ್ಣೆಯಲ್ಲಿ ತೂಕ ಹೆಚ್ಚಿಸುವ ಪೋಷಕಾಂಶಗಳಿವೆ. ಈ ಎಣ್ಣೆಯನ್ನು ನಮ್ಮ ದೈನಂದಿನ ಆಹಾರಗಳಲ್ಲಿ ಬಳಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
 
* ಮಾಂಸಗಳು: ಮಾಂಸವು ಕ್ಯಾಲರಿಯುಕ್ತವಾಗಿದ್ದು, ತೂಕವನ್ನು ಬಹು ಬೇಗನೆ ವೃದ್ಧಿಸುತ್ತದೆ. ಇದನ್ನು ಆರೋಗ್ಯಯುತ ಶರೀರಕ್ಕಾಗಿ, ಆರೋಗ್ಯಯುತ ಆಹಾರ ಕ್ರಮದಲ್ಲಿ ಬಳಸಬಹುದು. ಇವು ಪ್ರೋಟೀನ್‌ಗಳ ಒಂದು ಆಗರವಾಗಿದ್ದು, ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿವೆ.
 
* ಕೆನೆಭರಿತ ಹಾಲು: ಕೊಬ್ಬು ಹೊಂದಿರುವ ಕೆನೆಭರಿತ ಹಾಲನ್ನು ನೀವು ಓಟ್ ಮಿಲ್, ಧಾನ್ಯಗಳೊಂದಿಗೆ, ಅಥವಾ ಹಾಗೆಯೇ ಒಂದು ಲೋಟದಷ್ಟು ಚಾಕಲೇಟ್ ಸ್ವಾದಭರಿತ ಪೇಯವಾಗಿಯೂ ಬಳಸಬಹುದು. ಇದು ಕ್ಯಾಲರಿಗಳಿಂದ ಸಮೃದ್ಧವಾಗಿದ್ದು, ಅನ್ನಾಂಗ A ಮತ್ತು ಅನ್ನಾಂಗ D ಗಳನ್ನು ಸಹ ಹೊಂದಿದೆ. ತೂಕವನ್ನು ಅಲ್ಪಾವಧಿಯಲ್ಲಿ ಗಳಿಸಿಕೊಳ್ಳಲು ಕೆನೆಭರಿತ ಹಾಲು ಸಹಾಯಕಾರಿಯಾಗಿದೆ. 
 
* ಒಣ ಹಣ್ಣುಗಳು ಮತ್ತು ಕಾಳುಗಳು: ಇವು ಕ್ಯಾಲರಿಗಳು ಮತ್ತು ಪೋಷಕಾಂಶಗಳ ಆಗರವಾಗಿದೆ ಮತ್ತು ನಾರಿನ ಸಮೃದ್ಧ ಮೂಲಗಳಾಗಿವೆ. ಒಂದು ಕಪ್‌ನಷ್ಟು ಒಣದ್ರಾಕ್ಷಿಯು ಸುಮಾರು 449 ಕ್ಯಾಲೋರಿಗಳಷ್ಟು ಮತ್ತು ಒಂದು ಕಪ್ ನಷ್ಟು ಬಾದಾಮಿಯು ಸರಿಸುಮಾರು 529 ಕ್ಯಾಲರಿಗಳಷ್ಟು ಶಕ್ತಿಯನ್ನು ಹೊಂದಿದೆ. ಇದು ತೂಕ ಹೆಚ್ಚಳಕ್ಕೆ ಸಹಾಯಕವಾಗಿದೆ.
 
ಇವೆಲ್ಲ ಆಹಾರ ಪದಾರ್ಥಗಳಿಂದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಇಂತಹ ಆಹಾರ ಪದಾರ್ಥಗಳಿಂದಲೂ ತೂಕ ಹೆಚ್ಚಳವಾಗದೇ ಇದ್ದರೆ ವೈದ್ಯರ ಸಲಹೆಯ ಮೇರೆಗೆ ದೇಹದ ತೂಕ ಹೆಚ್ಚಳಕ್ಕೆ ಪೂರಕವಾದ ಔಷಧಿಗಳನ್ನು ಸೇವಿಸಿದರೆ ಉತ್ತಮ ಪರಿಣಾಮ ಕಂಡುಬರುವ ಸಾಧ್ಯತೆಗಳು ಇವೆ. ಆದ್ದರಿಂದ ವೈದ್ಯರ ಸಲಹೆಯನ್ನು ಅವಶ್ಯವಾಗಿ ತೆಗೆದುಕೊಂಡು ನಿಮ್ಮ ದೇಹಕ್ಕೆ ಒಗ್ಗುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳುವುದು ಉತ್ತಮ. ಹಾಗೆಯೇ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು, ನಿಯಮಿತವಾದ ತೂಕವನ್ನು ಹೆಚ್ಚಿಸಿಕೊಂಡು ಆಕರ್ಷಕವಾದ ದೇಹವನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ