ತುಳಸಿ ಬೀಜ ತಿನ್ನೋದ್ರಿಂದ ಒತ್ತಡ ಕಡಿಮೆಯಾಗುತ್ತೆ! ಒಮ್ಮೆ ಟ್ರೈ ಮಾಡಿ

ಗುರುವಾರ, 16 ಜೂನ್ 2022 (12:40 IST)
ತುಳಸಿ ಎಲೆ ದೇಹದ ಉರಿಯೂತ ನಿವಾರಿಸುತ್ತೆ ಮತ್ತು ರೋಗನಿರೋಧಕ ಶಕ್ತಿ ಬಲಪಡಿಸುತ್ತೆ. ತುಳಸಿ ಎಲೆಯ ಪ್ರಯೋಜನ ಸಾಕಷ್ಟಿವೆ ಎಂದು ನಿಮಗೆ ತಿಳಿದಿದೆ.


 ತುಳಸಿ ಬೀಜ ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣ ಹೊಂದಿರುತ್ತೆ. ಅಷ್ಟೇ ಅಲ್ಲ ತುಳಸಿ ಬೀಜ ಜೀರ್ಣಕ್ರಿಯೆ, ತೂಕ ನಷ್ಟ, ಕೆಮ್ಮು ಮತ್ತು ಶೀತದ ಚಿಕಿತ್ಸೆಯಲ್ಲಿಯೂ ಪರಿಣಾಮಕಾರಿ. ಹಾಗಾದ್ರೆ ಬನ್ನಿ ತುಳಸಿ ಬೀಜದ ಪ್ರಯೋಜನದ ಬಗ್ಗೆ ತಿಳಿಯೋಣ.

ಒತ್ತಡ ನಿವಾರಣೆ
ತುಳಸಿ ಬೀಜ ಮೆದುಳಿಗೆ ಪ್ರಯೋಜನಕಾರಿ. ಅದರ ಸೇವನೆ ಒತ್ತಡ ಮತ್ತು ಆತಂಕದಂತಹ ಸಮಸ್ಯೆ ನಿವಾರಿಸುತ್ತೆ . ತುಳಸಿ ಬೀಜ ಮಾನಸಿಕ ಕಾಯಿಲೆ ಅಪಾಯವನ್ನು ಕಡಿಮೆ ಮಾಡುತ್ತೆ. ಒತ್ತಡ ನಿವಾರಿಸಲು ನೀವು ತುಳಸಿ ಬೀಜ ಸೇವಿಸಬೇಕು. ಇದರಿಂದ ಮನಸ್ಸು ಶಾಂತವಾಗುತ್ತೆ.

 
ರೋಗನಿರೋಧಕ ಶಕ್ತಿ
ತುಳಸಿ ಬೀಜ ಫ್ಲೇವನಾಯ್ಡ್ ಮತ್ತು ಫಿನೋಲಿಕ್ ಹೊಂದಿದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ. ಇದಲ್ಲದೆ, ಚಳಿಗಾಲದಲ್ಲಿ ತುಳಸಿ ಬೀಜದ ಕಷಾಯ ತಯಾರಿಸಿ ತಣ್ಣಗೆ ಕುಡಿಯೋದು ಪ್ರಯೋಜನಕಾರಿ. ನೀವು ತುಳಸಿ ಬೀಜ ಚಹಾದಲ್ಲಿ ಹಾಕಿ ಸೇವಿಸಬಹುದು.
 ತ್ವಚೆ ಫ್ರೆಶ್
ತುಳಸಿ ಬೀಜ ಸಾಕಷ್ಟು ಆಂಟಿ-ಆಕ್ಸಿಡೆಂಟ್ ಹೊಂದಿದೆ, ಇದು ಫ್ರೀ ರ್ಯಾಡಿಕಲ್ ಗಳಿಂದ ಉಂಟಾಗುವ ಹಾನಿಯನ್ನು ತಡೆಯುತ್ತೆ . ಈ ಫ್ರೀ ರಾಡಿಕಲ್ ಗಳ ಹಾನಿಯಿಂದಾಗಿ, ವೃದ್ಧಾಪ್ಯವು ವಯಸ್ಸಿಗೆ ಮೊದಲೇ ಬರಲು ಪ್ರಾರಂಭಿಸುತ್ತೆ.  ಆದರೆ ನೀವು ಆಹಾರದಲ್ಲಿ ತುಳಸಿ ಬೀಜ ಬಳಸಿದರೆ, ದೀರ್ಘಕಾಲದವರೆಗೆ ಯಂಗ್ ಆಗಿ ಕಾಣಬಹುದು

ಹೊಟ್ಟೆ ಸಮಸ್ಯೆ
ತುಳಸಿ ಬೀಜ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತೆ. ಆಗಾಗ್ಗೆ ಅನೇಕ ಜನರು ಮಲಬದ್ಧತೆ, ಅಸಿಡಿಟಿ, ಅಜೀರ್ಣದಂತಹ ಹೊಟ್ಟೆಯ ಸಮಸ್ಯೆ ಹೊಂದುತ್ತಾರೆ. ತುಳಸಿ ಬೀಜ ಈ ಎಲ್ಲಾ ರೋಗಕ್ಕೆ ತುಂಬಾ ಪ್ರಯೋಜನಕಾರಿ.

ತುಳಸಿ ಬೀಜದಲ್ಲಿರುವ ನಾರಿನಂಶ ಕರುಳನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತೆ. ನೀವು ತುಳಸಿ ಬೀಜವನ್ನು ನೀರಿನಲ್ಲಿ ಹಾಕಿಡಿ. ನೀರಿನಲ್ಲಿ ಹಾಕಿದಾಗ, ಬೀಜಗಳು ಉಬ್ಬುತ್ತವೆ ಮತ್ತು ಮೇಲೆ ಜಿಲೆಟಿನ್ ಪದರ ರೂಪಿಸುತ್ತೆ. ಇದನ್ನು ನೀರಿನೊಂದಿಗೆ ಕುಡಿಯುವುದರಿಂದ ಹೊಟ್ಟೆ ಸಮಸ್ಯೆ ಇರೋದಿಲ್ಲ. 

ತೂಕ ಇಳಿಕೆ
ನೀವು ಒಬೆಸಿಟಿಯಿಂದ ಬಳಲುತ್ತಿದ್ದರೆ, ತುಳಸಿ ಬೀಜ ತಿನ್ನುವುದರಿಂದ ತೂಕ ಸಹ ಕಡಿಮೆ ಮಾಡಬಹುದು. ತುಳಸಿ ಬೀಜ ತುಂಬಾ ಕಡಿಮೆ ಕ್ಯಾಲೋರಿ ಮತ್ತು ಫೈಬರ್ ಸಮೃದ್ಧವಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ