ಆ ಮಗುವಾಯಿತೆಂದು ಗಂಡ ಪತ್ನಿಗೆ ಮಾಡಿದ್ದೇನು?

ಬುಧವಾರ, 28 ಆಗಸ್ಟ್ 2019 (13:35 IST)
ಪ್ರಶ್ನೆ: ಸರ್. ನಾನು ಮದುವೆಯಾಗಿ ಐದು ವರ್ಷಗಳಾಗಿವೆ. ಇಷ್ಟು ವರ್ಷದ ಬಳಿಕ ನನಗೆ ಹೆಣ್ಣು ಮಗು ಹುಟ್ಟಿದೆ. ಆದರೆ ಗಂಡನಿಗೆ ಗಂಡು ಮಗುವೇ ಬೇಕಂತೆ.

ಹೀಗಾಗಿ ನನ್ನ ಜತೆ ಸೇರುತ್ತಿಲ್ಲ. ಎರಡು ವರ್ಷದಿಂದ ಮಗಳ ಪಾಲನೆಯನ್ನೂ ಮಾಡುತ್ತಿಲ್ಲ. ನನ್ನ ಜೊತೆಗೂ ಸರಿಯಿಲ್ಲ. ರಾತ್ರಿಯೂ ನನ್ನ ಜತೆ ಮಲಗೋದಿಲ್ಲ. ಮುಂದೇನು ಮಾಡಲಿ?

ಉತ್ತರ: ಗಂಡಿನ ಪ್ರತಿಷ್ಠೆ ಹಾಗೂ ಗಂಡ ಸಂತಾನ ಬೇಕೆಂದು ಕೆಲವು ವಿಕೃತ ಮನಸ್ಸುಗಳು ಹೀಗೆ ಮಾಡುತ್ತವೆ. ಅಸಲಿಗೆ ನಿಮ್ಮ ಗಂಡನ ಜತೆ ಕುಳಿತು ಮಾತನಾಡಿ. ಸಮಸ್ಯೆ ಪರಿಹಾರವಾಗದ್ದರೆ ನಿಮ್ಮ ಹಾಗೂ ಅವರ ಹಿರಿಯರನ್ನು ಕರೆದು ಮಾತನಾಡಿಸಿ ನೋಡಿ.

ಆ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರ ನಿಮಗೆ ಇದ್ದೇ ಇದೆ. ಯಾವ ಗಂಡಸೂ ಕೂಡ ಹೆಂಡತಿಯ ಜತೆಗೆ ಸರಸ ಬಿಟ್ಟು ವರ್ಷಗಳವರೆಗೆ ದೂರ ಇರೋದಿಲ್ಲ. ನಿಮ್ಮ ಗಂಡನಿಗೆ ಬೇರೊಬ್ಬಳ ಜತೆ ಸಂಬಂಧ ಇದೆಯಾ ಅನ್ನೋದನ್ನು ತಿಳಿಯಿರಿ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ