ಸತ್ತ ಮೇಲೆ ಮನುಷ್ಯ ಏನಾಗುತ್ತಾನೆ? ವಿಜ್ಞಾನಿಗಳು ಕಂಡುಕೊಂಡ ಸತ್ಯವಿದು!

ಸೋಮವಾರ, 13 ಮಾರ್ಚ್ 2017 (09:49 IST)
ನವದೆಹಲಿ: ಸತ್ತ ಮೇಲೆ ಮನುಷ್ಯ ಏನಾಗುತ್ತಾನೆ? ಅದಕ್ಕೆ ಸ್ಪಷ್ಟ ಉತ್ತರ ಎಲ್ಲೂ ಇಲ್ಲ. ಆದರೆ ಕೆನಡಾದ ವೈದ್ಯರ ತಂಡವೊಂದು ಇದಕ್ಕೆ ಉತ್ತರ ಕಂಡುಕೊಳ್ಳುವ ಯತ್ನ ಮಾಡಿದೆ.


ರಕ್ತದೊತ್ತಡ ಮತ್ತು ಹೃದಯ ಬಡಿತ ನಿಂತ ಮೇಲೆ ಮನುಷ್ಯ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಗುತ್ತದೆ. ಆದರೆ ಮನುಷ್ಯ ಸತ್ತ ಮೇಲೆ 10 ನಿಮಿಷಗಳ ಕಾಲ ಆತನ ಮೆದುಳು ಸಜೀವವಾಗಿರುತ್ತದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

ಕೆನಡಾದ ವೈದ್ಯರು ತೀವ್ರ ನಿಗಾ ಘಟಕದಲ್ಲಿದ್ದ ನಾಲ್ವರು ರೋಗಿಗಳ ಮೇಲೆ ಸಂಶೋಧನೆ ನಡೆಸಿ ಈ ಸತ್ಯ ಕಂಡುಕೊಂಡಿದ್ದಾರೆ. ಕೃತಕ ಉಸಿರಾಟ ತೆಗೆದ ಮೇಲೆ ಮೊದಲು ಇವರ ಉಸಿರಾಟ ಮತ್ತು ರಕ್ತ ಪರಿಚಲನೆ ನಿಂತು ಹೋಯಿತು. ಆದರೆ ಮೆದುಳು ಮಾತ್ರ ನಂತರವೂ 10 ನಿಮಿಷ ಕೆಲಸ ಮಾಡುತ್ತಿತ್ತು ಎಂದು ವೈದ್ಯರು ಕಂಡುಕೊಂಡಿದ್ದಾರೆ. ಈ ಬಗ್ಗೆ ವೈದ್ಯರು ಇನ್ನೂ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ