ಪ್ರಶ್ನೆ: ನಾನು 33 ವರ್ಷದ ಗೃಹಿಣಿ. ಎರಡು ತಿಂಗಳ ಮಗುವಿದೆ. ನನಗೆ ಸ್ತನ ಬಾವು ಮತ್ತು ಹೊಡೆತ ಆಗಾಗ್ಗೆ ಕಂಡುಬರುತ್ತಿದೆ. ಇದಕ್ಕೆ ಪರಿಹಾರ ಏನಾದರೂ ಇದೆಯಾ? ಇದ್ದರೆ ತಿಳಿಸಿ.
ಉತ್ತರ: ಪ್ರಸೂತಗಳಿಗೆ ಮೂರು ಇಲ್ಲವೇ ನಾಲ್ಕು ದಿನಗಳಲ್ಲಿ ಎದೆಯೊಳಗೆ ಹಾಲು ಕೂಡುವಿಕೆಯಿಂದ ಕೆಲವರಿಗೆ ಜ್ವರ ಕಾಣಿಸಿಕೊಳ್ಳಬಹುದು. ಆಗ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ನಿಮಗೆ ಎರಡು ತಿಂಗಳು ಮಗುವಿದೆ ಎಂದಿದ್ದೀರಿ.
ವೈದ್ಯರ ಸಲಹೆಯಂತೆ ಎರಡು ಇಲ್ಲವೇ ಮೂರು ಗಂಟೆಗೊಮ್ಮೆ ಮಗುವಿಗೆ ಎದೆಹಾಲು ಕುಡಿಸಬೇಕು. ಸ್ತನಗಳ ಹೊಡೆತವು, ಬಾವು ಮತ್ತು ನೋವಿನಿಂದ ಸಾಮಾನ್ಯವಾಗಿ ಆಗಿರುತ್ತದೆ. ಇದಕ್ಕಾಗಿ ಸ್ತನವನ್ನು ಆಗಾಗ್ಗೆ ಸ್ವಚ್ಛಗೊಳಿಸುತ್ತಾ ಇರಬೇಕು.
ಸಾಧ್ಯವಾದರೆ ಬಿಸಿನೀರಿಯಲ್ಲಿ ಬಟ್ಟೆ ಎದ್ದಿ ಸ್ತನಗಳಿಗೆ ಕಾವು ಕೊಡಬೇಕು. ಇದನ್ನು ಪ್ರಯತ್ನಿಸಿದ ಬಳಿಕವೂ ನೋವು ಕಡಿಮೆಯಾಗದಿದ್ದರೆ ಸ್ತ್ರೀ ವೈದ್ಯರನ್ನು ಖಂಡಿತ ಭೇಟಿ ಮಾಡಿ.