ಯಾವ ಹಣ್ಣಿನಲ್ಲಿ ಎಷ್ಟು ಪ್ರಮಾಣದ ಸಕ್ಕರೆಯ ಅಂಶ ಅಡಗಿದೆ ಗೊತ್ತಾ?

ಶುಕ್ರವಾರ, 12 ಏಪ್ರಿಲ್ 2019 (10:31 IST)
ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ತುಂಬಾ ತುಂಬಾ ಉತ್ತಮ. ಆದರೆ ಈ ಹಣ್ಣುಗಳಲ್ಲಿರುವ ಸಕ್ಕರೆ ಅಂಶ ಕೆಲವೊಮ್ಮೆ ನಮ್ಮ ದೇಹದ ಸಕ್ಕರೆ ಮಟ್ಟವನ್ನು ಹೆಚ್ಚಿಸುವ  ಮೂಲಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಬಹುದು. ಆದ್ದರಿಂದ ಯಾವ ಹಣ್ಣಿನಲ್ಲಿ ಎಷ್ಟು ಪ್ರಮಾಣದ ಸಕ್ಕರೆಯ ಅಂಶವಿದೆ, ಯಾವುದನ್ನು ತಿಂದರೆ ಉತ್ತಮ.

*ಕಿತ್ತಲೆ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಈ ಹಣ್ಣಿನಲ್ಲಿ ನೈಸರ್ಗಿಕವಾಗಿ 11 ಗ್ರಾಂ.ನಷ್ಟು ಸಕ್ಕರೆಯ ಪ್ರಮಾಣವಿರುತ್ತದೆ. ಇದನ್ನು ಜ್ಯೂಸ್ ಮಾಡುವುದರಿಂದ ಔಷಧೀಯ ಗುಣ ಕಡಿಮೆಯಾಗುತ್ತದೆ.

 

*ದಿನಕ್ಕೊಂದು ಸೇಬು  ತಿಂದರೆ ವೈದ್ಯರಿಂದ ದೂರವಿರಬಹುದು ಎನ್ನುತ್ತಾರೆ. ಆದರೆ ಸೇಬಿನಲ್ಲೂ 17-18 ಗ್ರಾಂ.ನಷ್ಟು ಸಕ್ಕರೆಯ ಅಂಶವಿದೆ. ಇದನ್ನೂ ಸಹ ಜ್ಯೂಸ್ ಮಾಡುವುದಕ್ಕಿಂತಲೂ ಕಚ್ಚಿ ತಿನ್ನುವುದು ಉತ್ತಮ.

 

*ಪೀಚ್ ತುಂಬಾ ರುಚಿಕರ ಹಣ್ಣಾಗಿದೆ. ಇದರಲ್ಲಿ 12 ಗ್ರಾಂ ಸಕ್ಕರೆಯ ಅಂಶವಿದೆ.

 

*ರಸ್​ಬೆರ್ರಿ ಹಣ್ಣಿನಲ್ಲಿ ಸಕ್ಕರೆಯ ಅಂಶ ತುಂಬಾ ಕಡಿಮೆಯಿರುತ್ತದೆ. ಒಂದು ಲೋಟ ರಸ್​ಬೆರ್ರಿ ರಸದಲ್ಲಿ ಕೇವಲ 5 ಗ್ರಾಂ.ನಷ್ಟು ಸಕ್ಕರೆಯಿರುತ್ತದೆ.

 

*ಅವಕಾಡೊ(ಬಟರ್ ಫ್ರೂಟ್) ಅಥವಾ ಬೆಣ್ಣೆಹಣ್ಣು ಕಡಿಮೆ ಪ್ರಮಾಣದ ಸಕ್ಕರೆ ಅಂಶ ಹೊಂದಿರುತ್ತದೆ. ಫೈಬರ್ ಮತ್ತು ಉತ್ತಮ ಕೊಬ್ಬಿನಾಂಶ ಹೆಚ್ಚಾಗಿರುವ ಈ ಹಣ್ಣಿನಲ್ಲಿ ಕೆಲವೇ ಕೆಲವು ಗ್ರಾಂಗಳಷ್ಟು ಸಕ್ಕರೆ ಅಂಶ ಕಂಡು ಬರುತ್ತದೆ.

 

*ನೇರಳೆ ಮತ್ತು ಬೆರ್ರಿಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಂಶಗಳು ಹೆಚ್ಚಾಗಿರುತ್ತದೆ. ಕಡಿಮೆ ಪ್ರಮಾಣದ ಸಕ್ಕರೆ ಅಂಶ ಹೊಂದಿರುವ ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ.

 

*ಸ್ಟ್ರಾಬೆರಿಯಲ್ಲಿ ಸಕ್ಕರೆ ಪ್ರಮಾಣವು ತುಂಬಾ ಕಡಿಮೆಯಿದ್ದು, ಫೈಬರ್ ಅಂಶ ಜಾಸ್ತಿಯಿರುತ್ತದೆ. ಸಕ್ಕರೆ ಪ್ರಮಾಣದ ಭಯವಿಲ್ಲದೆ ತಿನ್ನಬಹುದಾದ ಹಣ್ಣುಗಳಲ್ಲಿ ಸ್ಟ್ರಾಬೆರಿ ಕೂಡ ಒಂದಾಗಿದೆ.

 

*ದ್ರಾಕ್ಷಿಗಳಲ್ಲಿ ಸುಮಾರು 8 ಗ್ರಾಂ.ನಷ್ಟು ಸಕ್ಕರೆ ಅಂಶಗಳಿರುತ್ತದೆ. ಬಾಯಲ್ಲಿ ನೀರೂರಿಸುವ ದ್ರಾಕ್ಷಿಯನ್ನು ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಉತ್ತಮ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ