ಹುಟ್ಟಿದ ತಕ್ಷಣ ಮಗು ಅಳುವುದು ಯಾಕೆ ಗೊತ್ತಾ?

ಮಂಗಳವಾರ, 14 ಮಾರ್ಚ್ 2017 (09:59 IST)
ಬೆಂಗಳೂರು: ಮಗುವೊಂದು ತಾಯಿ ಗರ್ಭದಿಂದ ಹೊರ ಬಂದ ತಕ್ಷಣ ಮಾಡುವ ಕೆಲಸವೆಂದರೆ, ಗಂಟಲು ಬಿರಿಯುವಂತೆ ಅಳುವುದು. ಹುಟ್ಟಿದ ತಕ್ಷಣ ಮಗು ಅಳುವುದು ಯಾಕೆ ಗೊತ್ತಾ?

 
ತಾಯಿ ಹೊಟ್ಟೆಯಲ್ಲಿದ್ದಾಗ ಮಗು 9 ತಿಂಗಳೂ ಲಯಬದ್ಧವಾಗಿ ಕೇಳುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ತನ್ಮಯವಾಗಿರುತ್ತಿತ್ತು . ಆ ಶಬ್ಧ ತನಗೆ ರಕ್ಷಣೆ ನೀಡುತ್ತದೆ ಎಂದೇ ಭಾವಿಸುತ್ತದೆ.

ಆದರೆ ಹೊರ ಪ್ರಪಂಚಕ್ಕೆ ಬಂದ ತಕ್ಷಣ ಆ ಶಬ್ಧ ದೂರವಾಗಿ ಅದಕ್ಕೆ ತಾನೇನೋ ಅಸುರಕ್ಷಿತ ಜಾಗಕ್ಕೆ ಬಂದನೇನೋ ಎಂದು ಭಯವಾಗುತ್ತದೆ. ಆದರೆ ಅಳುತ್ತಿರುವ ಮಗುವನ್ನು ತಾಯಿ ತನ್ನ ಹತ್ತಿರಕ್ಕೆ ಕರೆದುಕೊಂಡ ತಕ್ಷಣ ಮಗು ಅಳು ನಿಲ್ಲಿಸುತ್ತದೆ.

ಯಾಕೆಂದರೆ ಅದಕ್ಕೆ ಅಮ್ಮನ ಎದೆ ಹತ್ತಿರ ತಂದಾಗ ಮತ್ತೆ ಅದಕ್ಕೆ ಅದೇ ಲಯಬದ್ಧ ಎದೆಬಡಿತದ ಸದ್ದು ಕೇಳಿಸುತ್ತದೆ. ಇದರಿಂದ ತಾನು ಸುರಕ್ಷಿತನಾಗಿದ್ದೇನೆ ಎಂಬ ಭಾವನೆ ಬರುತ್ತದೆ. ಅಷ್ಟು ನಂಬಿಕೆ ಆ ಪುಟ್ಟ ಮಗುವಿಗೆ ತನ್ನ ಅಮ್ಮನ ಮೇಲೆ. ಅದಕ್ಕೇ ಅಲ್ಲವೇ ಅಮ್ಮ ಗ್ರೇಟ್ ಎನ್ನುವುದು..!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ