ಮದ್ಯ ಸೇವನೆಯಿಂದ ಸ್ತನ ಕ್ಯಾನ್ಸರ್‌: ಮಹಿಳೆಯರೇ ಎಚ್ಚರ

ಬುಧವಾರ, 19 ಜೂನ್ 2019 (16:25 IST)
ಮದ್ಯ ಸೇವನೆ ಸ್ತನ ಕ್ಯಾನ್ಸರ್‌ನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನುವ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ತಿಳಿಯದಿರುವ ಸಂಗತಿ. ಐವರು ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಮದ್ಯ ಸೇವನೆಯಿಂದ ಸ್ತನ ಕ್ಯಾನ್ಸರ್‌ ಬರಲಿದೆ ಎನ್ನುವ ಅಂಶ ತಿಳಿದಿದೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. 
ಮದ್ಯ ಸೇವನೆಯಿಂದ ಶೇ.5 ರಿಂದ ಶೇ.11 ರಷ್ಟು ಸ್ತನ ಕ್ಯಾನ್ಸರ್ ಮೇಲೆ ಪ್ರಭಾವ ಬೀರಲಿದೆ. ಮಹಿಳೆಯರು ಮದ್ಯ ಸೇವನೆಯನ್ನು ಕಡಿತಗೊಳಿಸಿದಲ್ಲಿ ಸ್ತನ ಕ್ಯಾನ್ಸರ್‌ನಿಂದ ಪಾರಾಗಬಹುದಾಗಿದೆ ಎಂದು ರಿಸರ್ಚ್ ಯುಕೆ ಸಮೀಕ್ಷಾ ಸಂಸ್ಥೆ ವರದಿ ಮಾಡಿದೆ.
 
ಸಮೀಕ್ಷೆಯಲ್ಲಿ ಸುಮಾರು 200 ಮಹಿಳೆಯರು ಪಾಲ್ಗೊಂಡಿದ್ದು ಅದರಲ್ಲಿ ಕೇವಲ 75 ಜನರು ಮಾತ್ರ ಜೀವನಶೈಲಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದ್ದಾರೆ. ಸಿಗರೇಟು ಸೇವನೆ ಹಾಗೂ ಮದ್ಯ ಸೇವನೆಯಿಂದ ಸ್ತನ ಕ್ಯಾನ್ಸರ್‌ನಲ್ಲಿ ಹೆಚ್ಚಳವಾಗಲಿದೆ ಎನ್ನುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. 
 
ಮದ್ಯ ಸೇವಿಸುವ 152 ಮಹಿಳೆಯರಲ್ಲಿ 88 ಮಹಿಳೆಯರು ಮದ್ಯದಲ್ಲಿ ಎಷ್ಟು ಮಾತ್ರದಲ್ಲಿ ಅಲ್ಕೋಹಾಲ್ ಅಂಶ ಇದೆ ಎನ್ನುವುದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ. ಇತರರು ಸ್ಟ್ಯಾಂಡರ್ಡ್ ಗ್ಲಾಸ್ ವೈನ್ ಮತ್ತು ಪಿಂಟ್ ಬಿಯರ್‌ನಲ್ಲಿ ಒಂದೇ ಪ್ರಮಾಣದ ಅಲ್ಕೋಹಾಲ್ ಇದೆ ಎನ್ನುವ ಬಗ್ಗೆ ಅಂದಾಜು ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ