ನಗರದಲ್ಲಿ ಇಂದು ವಿಶ್ವ ಕಾಮಾಲೆ ದಿನ ಆಚರಣೆ

ಶುಕ್ರವಾರ, 28 ಜುಲೈ 2023 (15:02 IST)
ಇಂದು ವಿಶ್ವ ಕಾಮಾಲೆ ದಿನಾಚರಣೆ ಅಂಗವಾಗಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕರ್ನಾಟಕ  ಗ್ಯಾಸ್ಟ್ರೋ ಸೆಂಟರ್ ಹಾಗೂ ಲಯನ್ಸ್ ಇಂಟರ್ನ್ಯಾಷನಲ್, ಗೌತಮ್ ನರ್ಸಿಂಗ್ ಕಾಲೇಜ್ ,ಸರ್ವೋದಯ ಕಾಲೇಜ್ ಆಫ್ ನರ್ಸಿಂಗ್  ಇವರ ಸಹಯೋಗದೊಂದಿಗೆ ವಿಶ್ವ ಕಾಮಾಲೆ ಅಂಗವಾಗಿ ಜಾಗೃತಿ ಕಾಲಿನಡಿಗೆ ಕಾರ್ಯಕ್ರಮ ಹಾಗೂ ಉಚಿತ ತಪಾಸಣ ಶಿಬಿರ ಹಮ್ಮಿಕ್ಕೂಳಲಾಗಿತ್ತು. ಕರ್ಯಕ್ರಮವನ್ನ ವೈದ್ಯಕೀಯ ಸಚಿವ ಡಾ, ಶರಣು ಪ್ರಕಾಶ್ ಪಾಟೀಲ್ ಹಾಗೂ ಮಾಜಿ ಸಚಿವರು ಕೆ ಗೋಪಾಲಯ್ಯ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಅಧ್ಯಕ್ಷರಾದ ನೆಲ ನರೇಂದ್ರಬಾಬು, ಮಾಜಿ ಬಿಬಿಎಂಪಿ ಉಪ ಮಹಾಪೌರರಾದ ಎಸ್ ಹರೀಶ್, ಡಾಕ್ಟರ್ ಉಮೇಶ್ ಜಾಲಹಳ್, ವಿದ್ಯಾರ್ಥಿ ಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತಿಯಲ್ಲಿದ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ