ಆರೋಗ್ಯ ಸಂರಕ್ಷಣಾ ರಂಗದಲ್ಲಿ ಯೋಗಕ್ಕೆ ಪ್ರಮುಖ ಪಾತ್ರವಿದೆ. ಯಾವುದೇ ಔಷಧಿ ಇಲ್ಲದೆ ದೇಹವನ್ನು ದಂಡಿಸುವ ಮೂಲಕ ಉಸಿರಿನ ಗಾಳಿಯನ್ನು ನಿಯಂತ್ರಿಸಿ ಅಂಗಾಂಗಗಳಿಗೆ ವ್ಯಾಯಾಮ ನೀಡುವುದು ಯೋಗ ಸಾಧನೆಯ ವಿಧಾನ.
ಯೋಗ ಸಾಧನೆಯಲ್ಲಿ ಪ್ರಾಣಾಯಾಮವೂ ಒಂದು. ಪ್ರಾಣ ಎಂದರೆ ವಾಯು ಅಥವಾ ಗಾಳಿ. ಉಸಿರಾಟದ ಗಾಳಿಯನ್ನು ದೇಹದಿಂದ ಹೊರ ಹೋಗುವ ಹಾಗೂ ಎಲ ಪ್ರವೇಶಿಸುವ ಹಂತದಲ್ಲಿ ನಿಯಂತ್ರಿಸುವ ಮೂಲಕ ಪ್ರಾಣಾಯಾಮವನ್ನು ಮಾಡುತ್ತಾರೆ. ಪ್ರಾಣಾಯಾಮವು ಉಸಿರಿನಲ್ಲಿ ನಿಯಂತ್ರಣವನ್ನು ಹೇರುವ ಮೂಲಕ ದೇಹಕ್ಕೆ ಅಗತ್ಯವಿರುವ ಪ್ರಾಣವಾಯುವನ್ನು ಒದಗಿಸಲಾಗುತ್ತದೆ.
ಪ್ರಾಣಾಯಾಮವು ಶ್ವಾಸಕೋಶ, ಹೃದಯ ಹಾಗೂ ಮಿದುಳಿನತ್ತ ಶುದ್ಧ ಗಾಳಿಯನ್ನು ಹೇರಳವಾಗಿ ಪೂರೈಸುವಂತಹ ಯೋಗ ವಿಧಾನವನ್ನು ಹೊಂದಿದೆ. ಶ್ವಾಸೋಚ್ಛ್ವಾಸದಲ್ಲಿ ಸಂಪೂರ್ಣ ನಿಯಂತ್ರಣ ಹೇರುವುದರೊಂದಿಗೆ ಈ ವಿಧಾನವನ್ನು ಪೂರೈಸಲು ಸಾಧ್ಯ. ಇದರಿಂದ ರಕ್ತದಲ್ಲೂ ಶುದ್ಧ ಗಾಳಿ ಸೇರ್ಪಡೆಯಾಗುತ್ತದೆ.