ಕಾಫಿ ಕುಡಿದರೆ ಕ್ಯಾನ್ಸರ್‌ ಭಯವಿಲ್ಲ!

PTI
ಭಾರತೀಯ ತೋಟಬೆಳೆ ಹಾಗೂ ಸಭ್ಯ ಪೇಯವಾಗಿರುವ ಕಾಫಿ ಇದೀಗ ವೈದ್ಯ ಶಾಸ್ತ್ರದ ಗಮನ ಸೆಳೆದಿದೆ.ಕಾಫಿ ಸೇವನೆಯು ಪಿತ್ತಕೋಶದ ಕ್ಯಾನ್ಸರ್ ಸಾಧ್ಯತೆಯನ್ನು ತಡೆಯುತ್ತದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.

ಪಿತ್ತಕೋಶದ ಸೋಂಕಿನಿಂದ ಹೆಪಟೊಸೆಲ್ಯುಲರ್ ಕಾರ್ಸಿನೊಮ ಎಂಬ ಕ್ಯಾನ್ಸರ್ ಸಂಭವಿಸುತ್ತದೆ. ಇದು ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಈ ಕುರಿತು ನೇಪಲ್ಸ್‌ನ ಇಸ್ಟಿಟ್ಯೂಟೊ ಟ್ಯೂಮೊರಿಯ ಸಂಶೋಧಕರು ಅಧ್ಯಯನ ನಡೆಸಿ ಹೊಸ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ. ಅಧ್ಯಯನ ಈ ಅಪಾಯವನ್ನು ತಪ್ಪಿಸುವಲ್ಲಿ ಕಾಫಿ ಸೇವನೆ ಸಹಕರಿಸುತ್ತದೆ ಎಂದು ಹೇಳಿದೆ.

ಇಟೆಲಿಯಲ್ಲಿ ಕಾಫಿ ಸೇವನೆ ಅಧಿಕ. ಸಂಶೋಧಕರು ತಮ್ಮ ಕಾಫಿ-ಕಾನ್ಸರ್ ಸಂಬಂಧದ ಅಧ್ಯಯನಕ್ಕಾಗಿ ಕ್ಯಾನ್ಸರ್ ಪೀಡಿತ 185 ಮಂದಿ ಹಾಗೂ ರೋಗ ನಿಯಂತ್ರಿತ 412 ಮಂದಿಯನ್ನು ಆಯ್ದುಕೊಂಡಿದ್ದರು.

ವಾರದಲ್ಲಿ ಕನಿಷ್ಠ ಪಕ್ಷ 28 ಕಪ್ ಕಾಫಿ ಕುಡಿಯುವವರಲ್ಲಿ, ವಾರಕ್ಕೆ 14 ಕಪ್‌ಗಿಂತ ಕಡಿಮೆ ಕಾಫಿ ಕುಡಿಯುವವರಿಗಿಂದ ಕ್ಯಾನ್ಸ್‌ರ್ ಅಪಾಯ ಕಡಿಮೆ ಇದೆ. ಆದರೆ ವಾರಕ್ಕೆ 14ಕಪ್‌ಗಿಂತಲೂ ಕಡಿಮೆ ಕಾಫಿ ಕುಡಿಯುವವರಿಗಿಂತ ಕಾಫಿ ಕುಡಿಯದೇ ಇರುವವರಲ್ಲಿ ಕ್ಯಾನ್ಸರ್ ಅಪಾಯ ದುಪ್ಪಟ್ಟು ಹೆಚ್ಚಿದೆ ಎಂದು ಅಧ್ಯಯನ ಕಂಡುಕೊಂಡಿದೆ.

ಹೆಪಟೈಟಿಸ್ ಹಾಗೂ ಮದ್ಯಪಾನಕ್ಕೆ ನೇರ ಸಂಬಂಧವಿದೆ. ಆದರೆ ಚಹಾ ಅಥವಾ ಕೆಫೆನ್ ರಹಿತ ಕಾಫಿ ಹಾಗೂ ಕ್ಯಾನ್ಸರ್ ತಡೆಗೂ ಯಾವುದೇ ಸಂಬಂಧವಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಆದರೆ ಕಾಫಿಯಲ್ಲಿರುವ ಇತರ ಹಲವಾರು ಅಂಶಗಳು ಮದ್ಯಪಾನ ಅಥವಾ ಅಮಲು ಪದಾರ್ಥಗಳಿಂದಾಗಿ ಲಿವರ್‌ಗೆ ಉಂಟುಮಾಡುವ ಹಾನಿಯನ್ನು ತಡೆಯಬಹುದೆಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ