ನಗರಗಳಿಗೆ ವಲಸೆಯಿಂದ ಹೈಪರ್ ಟೆನ್ಷನ್

ND
ನಗರಗಳತ್ತ ವಲಸೆ ಹೋಗುವುದು ಹೈಪರ್‌ಟೆನ್ಷನ್‌ಗೆ ಕಾರಣ ಎಂದು ಇತ್ತೀಚಿನ ಅಧ್ಯಯನ ಹೇಳಿದೆ. ಅಖಿಲ ಭಾರತೀಯ ವೈದ್ಯವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗವು ನಡೆಸಿರುವ ಅಧ್ಯಯನವು ಈ ವಿಷಯವನ್ನು ಹೊರಗೆಡಹಿದೆ.

ನಗರದಲ್ಲೇ ನೆಲೆಸಿದವರಿಗೆ ಹೋಲಿಸಿದರೆ, ಇತ್ತೀಚೆಗೆ ನಗರಕ್ಕೆ ವಲಸೆ ಬಂದ ಪುರಷರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದೊತ್ತಡ ಕಾಣಿಸಿಸಿಕೊಳ್ಳುತ್ತದಂತೆ.

ಅಧ್ಯಯನಕ್ಕಾಗಿ 227 ಮಂದಿಯನ್ನು ಆಯ್ದುಕೊಂಡಿತ್ತು. ಇದಲ್ಲಿ ನಗರಕ್ಕೆ ವಲಸೆಬಂದು 10 ವರ್ಷಗಳಿಂದ ನೆಲೆಯೂರಿರುವ, ಎರಡು ವರ್ಷಗಳಿಂದೀಚೆಗೆ ನೆಲೆಸಿರುವ ಮತ್ತು 20 ವರ್ಷಕ್ಕೂ ಮೇಲ್ಪಟ್ಟಂತೆ ದೆಹಲಿಯಲ್ಲಿ ನೆಲೆಸಿರುವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಕುಳಿತ ಭಂಗಿಯಲ್ಲಿ ಪ್ರತಿಯೊಬ್ಬರ ಮೂರು ರಕ್ತದೊತ್ತಡ ರೀಡಿಂಗ್‌ಗಳನ್ನು ತೆಗೆಯಲಾಗಿತ್ತು. ಮತ್ತು ಅತ್ಯುದ್ವಿಗ್ನತೆಯ ಕುರಿತ ಅವರ ಹಿಂದಿನ ವಿವರಣೆ, ಹಾಗೂ ಈ ಹಿಂದೆ ಪಡೆದಿರುವ ಮತ್ತು ಈಗ ಪಡೆಯುತ್ತಿರುವ ಚಿಕಿತ್ಸೆಗಳ ವಿವರಣೆ ಪಡೆಯಲಾಗಿತ್ತು. ಇದರ ಪ್ರಕಾರ ಅದಾಗಲೇ ನೆಲೆಯೂರಿದವರಿಗೆ ಹೋಲಿಸಿದರೆ, ಇತ್ತೀಚೆಗೆ ವಲಸೆ ಬಂದವರಿಗೆ ಕಿರಿಯ ವಯಸ್ಸಿನಲ್ಲೇ ರಕ್ತದೊತ್ತಡ ಕಂಡುಬಂದಿದೆ. ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಮಹಿಳೆಯರಿಗಿಂತ ಪುರಷರು ಹೆಚ್ಚಿನ ಪ್ರಮಾಣದಲ್ಲಿ ಈ ತೊಂದರೆಯಿಂದ ಬಳಲುತ್ತಾರೆ.

ಇತ್ತೀಚೆಗಿನ ವಲಸಿಗರಲ್ಲಿ ಶೇ.25ರಷ್ಟು ಪುರಷರು ಮತ್ತು ಶೇ.17.7ರಷ್ಟು ಮಹಿಳೆಯರು ಹೈಪರ್‌ಟೆನ್ಷನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲವು ವರ್ಷಗಳಿಂದ ನೆಲೆಯೂರಿರುವವರಲ್ಲಿ ಶೇ14ರಷ್ಟು ಪುರುಷರು ಮತ್ತು ಶೇ.12ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ವೆಬ್ದುನಿಯಾವನ್ನು ಓದಿ