ಫಾಸ್ಟ್‌ಫುಡ್‌ ಜಂಕ್‌ ಆಹಾರದಿಂದ ಕ್ಯಾನ್ಸರ್!

PTI
ಜಾಗತೀಕರಣದ ಧಾವಂತ ಭಾರತೀಯರ ಜೀವನಶೈಲಿ ಬದಲಾಗುತ್ತಿದೆ.ಒತ್ತಡದ ಬದುಕು ಹಾಗೂ ಸ್ವತಃ ಅಡುಗೆ ಮಾಡುವ ಬದಲು ಮಾರುಕಟ್ಟೆಯ ಸಿದ್ಧ ಆಹಾರ ಸೇವನೆ ದೇಹದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ.

ಇಂತಹ ಜೀವನ ಶೈಲಿಯ ಫಲಿತಾಂಶವೆಂದರೆ ಹುಳಿತೇಗು, ಎದೆಯುರಿ. ಅಜೀರ್ಣ, ಅಲ್ಸರ್‌ ಅಂತಿಮವಾಗಿ ಕ್ಯಾನ್ಸರ್‍! ದೆಹಲಿಯಂತಹ ಮಹಾನಗರಗಳಲ್ಲಿ ಶೇ.82 ಮಂದಿ ಎದೆಯುರಿಯನ್ನು ಅನುಭವಿಸುತ್ತಿದ್ದರೆ, ಮುಂಬಯಿಯಲ್ಲಿ ಶೇ.75 ಹಾಗೂ ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌‌ಗಳಲ್ಲಿ ಕ್ರಮವಾಗಿ ಶೇ.72 ಮತ್ತು ಶೇ.68 ಮಂದಿ ಎದೆಯುರಿಯಿಂದ ಬಳಲುತ್ತಿದ್ದಾರೆ.

ಈ ಸಮೀಕ್ಷೆಯ ಮತ್ತೊಂದು ಪತ್ತೆ ಏನೆಂದರೆ, ಮಸಾಲೆಯುಕ್ತ ಪದಾರ್ಥ, ಸಂಸ್ಕರಿತ ಪದಾರ್ಥ ಹಾಗೂ ಜಂಕ್ ಪದಾರ್ಥ ಸೇವನೆಯು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.25-40 ಮಂದಿ ಎದೆಯುರಿಯನ್ನು ಹೊಂದುವುದಕ್ಕೆ ಕಾರಣ ಎಂದು ಹೇಳಿದೆ.

ಆತಂಕಪಡಬೇಕಾದ ವಿಚಾರವೆಂದರೆ, ನಿರಂತರ ಆಮ್ಲ ಉತ್ಪಾದನೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಲ್ಲದೆ ಆಹಾರದಲ್ಲಿ ಆಂಟಿಆಕ್ಸಿಡೆಂಟ್‌ಗಳ ಕೊರತೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಸಮಸ್ಯೆ ವಿಪರೀತಕ್ಕೆ ಹೋಗುವ ಮೊದಲು ಪಥ್ಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಜಂಕ್‌ ಆಹಾರ ಪದಾರ್ಥ ಸೇವನೆಯನ್ನು ಬಿಡಲು ಅಸಾಧ್ಯ ಎನ್ನುವವರು ವಾರಕ್ಕೊಮ್ಮೆ ಮಿತಿಗೊಳಿಸಿಕೊಂಡಲ್ಲಿ ಒಳ್ಳೆಯದು.

ಹೊರಗೆ ತಿನ್ನಲೇಬೇಕಾದ ಸಂದರ್ಭದಲ್ಲಿ, ಸಾಧ್ಯವಾದಷ್ಟು ಮಟ್ಟಿಗೆ ತೀರಾ ಕರಿದ ಆಹಾರಕ್ಕೆ ಬದಲಾಗಿ, ಹಣ್ಣುಗಳು, ತರಕಾರಿಗಳು, ಮೊಸರು ಮುಂತಾದವನ್ನು ಸೇವಿಸುವುದರ ಮೂಲಕ ಪಥ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದಾಗಿದೆ.

ಕಡೆಯದಾಗಿ, ಉತ್ತಮ ಜೀವನ ವಿಧಾನ ಅಂದರೆ, ಒತ್ತಡರಹಿತ ಅಥವಾ ಕಡಿಮೆ ಒತ್ತಡವಿರುವ ಜೀವನಶೈಲಿಯ ಅನುಸರಣೆ, ಧೀರ್ಘ ಕಾಲ ಕೆಲಸದಲ್ಲಿ ತೊಡಗುವುದು ಇವೆಲ್ಲವನ್ನು ಸರಿಯಾಗಿ ನಿಭಾಯಿಸುವುದು ಕಲಿತಲ್ಲಿ ಎದೆಯುರಿಯನ್ನು ಗಣನೀಯವಾಗಿ ದೂರಮಾಡಬಹುದು.

ವೆಬ್ದುನಿಯಾವನ್ನು ಓದಿ