ವೈನ್ 'ವೈನ'ಲ್ಲ, ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತಂತೆ

ದಿನನಿತ್ಯ ನೀವೊಂದು ದೊಡ್ಡ ಗ್ಲಾಸ್ ವೈನ್ ಕುಡಿಯುತ್ತಿರಾ? ಹೌದಾದರೆ ಈ ಅಭ್ಯಾಸ ಬಿಟ್ಟುಬಿಡಿ. ಇದು ಲಿವರ್ ಮತ್ತು ಕರುಳು ಕ್ಯಾನ್ಸರ್‌ಗೆ ಕಾರಣವಾಗುವ ಸಂಭವ ಐದು ಪಟ್ಟು ಎಂದು ತಜ್ಞರು ಹೇಳಿದ್ದಾರೆ. ಇಷ್ಟು ಮಾತ್ರವಲ್ಲ ಒಂದು ಪಿಂಟ್ ಬಿಯರ್, ಹಾಗೂ ವೋಡ್ಕಾ ಅಥವಾ ಜಿನ್ ಸೇವನೆಯೂ ಈ ಅಪಾಯವನ್ನು ಹೆಚ್ಚಿಸುತ್ತದಂತೆ. ಹಾಗಾಗಿ ಕುಡಿದು ಮಸ್ತ್ ಮಜಾ ಮಾಡೋ ಮುನ್ನ ಒಂದಿಷ್ಟು ಯೋಚಿಸಿ.

ವಿಶ್ವ ಕ್ಯಾನ್ಸರ್ ಕಾರ್ಯಕ್ರಮದ ವ್ಯವಸ್ಥಾಪಕ ರಾಚೆಲ್ ಥಾಂಪ್ಸನ್ ಅವರು ಹೇಳುವ ಪ್ರಕಾರ ದಿನಒಂದರ ಎರಡು ಯುನಿಟ್ ಆಲ್ಕೋಹಾಲ್ ಸೇವನೆ ಕರುಳು ಕ್ಯಾನ್ಸರ್ ಅಪಾಯವನ್ನು ಶೇ.18ರಷ್ಟು ಹೆಚ್ಚಿಸಿದರೆ, ಲಿವರ್ ಕ್ಯಾನ್ಸರ್ ಅಪಾಯವನ್ನು ಶೇ.20ರಷ್ಟು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಆದರೆ ದಿನಕ್ಕೊಂದು ಪೆಗ್ ಆರೋಗ್ಯಕರ, ಇದು ಹೃದ್ರೋಗದ ವಿರುದ್ಧ ಹೋರಾಡಲು ಸಹಕರಿಸುತ್ತದೆ ಎಂಬ ಅಧ್ಯಯನಗಳಿಗೆ ಪ್ರಸ್ತುತ ಎಚ್ಚರಿಗೆ ವಿರುದ್ಧವಾಗಿದೆ.

ಪ್ರತಿದಿನ ಒಂದು ದೊಡ್ಡ ಗ್ಲಾಸಿನಲ್ಲಿ ವೈನ್ ಸೇವನೆಯು ಕ್ಯಾನ್ಸರ್ ಅಪಾಯವನ್ನೊಡ್ಡುತ್ತದೆ ಎಂದು ವಿಜ್ಞಾನ ಹೇಳುತ್ತದೆ ಎಂದು ಥಾಂಪ್ಸನ್ ಹೇಳಿದ್ದಾರೆ. ಪ್ರತಿವರ್ಷ ಬ್ರಿಟನ್ನಿನಲ್ಲಿ ಪತ್ತೆಯಾಗುವ ಕ್ಯಾನ್ಸರ್ ಪ್ರಕಾರ, ಸಣ್ಣ ಮಟ್ಟಿನ ಕುಡಿತ ಸಹ ದೊಡ್ಡ ಮಟ್ಟದ ವ್ಯತ್ಯಾಸ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಬ್ರಿಟನ್ನಿನ ಪ್ರತಿವರ್ಷ ಮೂರು ಸಾವಿರಕ್ಕೂ ಅಧಿಕ ಮಂದಿಯಲ್ಲಿ ಲಿವರ್ ಕ್ಯಾನ್ಸರ್ ಪತ್ತೆಯಾಗುತ್ತಿದ್ದರೆ, ಅಷ್ಟೇ ಪ್ರಮಾಣದ ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಲ್ಲದೆ ಆಲ್ಕೋಹಾಲ್ ಸೇವನೆಯು ಸ್ತನ ಕ್ಯಾನ್ಸರ್, ಬಾಯಿ, ಗಂಟಲು ಮತ್ತು ಧ್ವನಿಪೆಟ್ಟಿ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಥಾಂಪ್ಸನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ