ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆಗಳು

WDWD
1. ಆರೋಗ್ಯವು ಉತ್ತಮವಾಗಿರಲು ಪ್ರತಿದಿನ ಮುಂಜಾನೆ 7-8 ತುಳಸಿ ಎಲೆಗಳನ್ನು ತಿನ್ನಿರಿ.
2. ನಿಮ್ಮ ದಿನನಿತ್ಯದ ಆಹಾರದಲ್ಲಿ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಬಳಸಿರಿ.
3.ಅತ್ಯಂತ ಖಾರ ಮತ್ತು ಹುಳಿಯಾದ ಪದಾರ್ಥಗಳನ್ನು ಹೆಚ್ಚು ಸೇವಿಸಬೇಡಿ.
4. ಸಿಗರೇಟು ಸೇವನೆ, ಅಲ್ಕೋಹಾಲ್ ಸೇವನೆ ಮತ್ತು ಮಾದಕ ದ್ರವ್ಯ ಸೇವನೆ ಮುಂತಾದವುಗಳಿಂದ ಆದಷ್ಟು ದೂರವಿರಿ.
5. ಪ್ರತಿದಿನ ಕನಿಷ್ಠ ಎರಡು ಲೀಟರ್ ನೀರನ್ನು ಕುಡಿಯಿರಿ.
6. ಕುಡಿಯಲು ತಣ್ಣೀರನ್ನು ಹೆಚ್ಚಾಗಿ ಬಳಸಬೇಡಿ. ಆದಷ್ಟು ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.
7. ದಿನನಿತ್ಯದ ಆಹಾರದಲ್ಲಿ ಮಾಂಸಾಹಾರದ ಪ್ರಮಾಣವನ್ನು ಕಡಿಮೆ ಮಾಡಿ.
8. ಇತರರ ಸಲಹೆಯಂತೆ ಯಾವುದಾದರೂ ಔಷದಿಗಳನ್ನು ಸೇವಿಸುವ ಮೊದಲು ನಿಮ್ಮ ಆತ್ಮೀಯ ವೈದ್ಯರ ಸಲಹೆಯನ್ನು ಪಡೆಯಿರಿ.
9. ದೇಹದ ಉಷ್ಣತೆಯನ್ನು ಕಡಿಮೆಗೊಳಿಸಲು ಹಾಲು, ತುಪ್ಪ ಮುಂತಾದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿರಿ.
10.ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿರಿಸಿ.

ವೆಬ್ದುನಿಯಾವನ್ನು ಓದಿ