ಚಾಕಲೇಟ್ ಪ್ರಿಯರಿಗೆ ಉತ್ತಮ ಆರೋಗ್ಯ

ಮಂಗಳವಾರ, 16 ಅಕ್ಟೋಬರ್ 2007 (14:47 IST)
ಚಾಕ್‌ಲೇಟ್ ನೋಡಿದ ಕೂಡಲೇ ಮಕ್ಕಳ ಬಾಯಲ್ಲಿ ಮಾತ್ರವಲ್ಲ, ದೊಡ್ಡವರ ಬಾಯಿಯಲ್ಲೂ ನೀರೂರುವುದು ಸಹಜ. ಆದರೆ ಚಾಕ್‌ಲೇಟ್ ಕಂಡರಾಗದ ಜನರು ಇದ್ದಾರೆ. ಚಾಕ್‌ಲೇಟ್ ಬಗ್ಗೆ ಪ್ರೀತಿ ಮತ್ತು ಉದಾಸೀನತೆ ಎರಡೂ ನಿರ್ದಿಷ್ಟ ರಾಸಾಯನಿಕ ಕ್ರಿಯೆಗೆ ಸಂಬಂಧಿಸಿದೆ.

ದೇಹದಲ್ಲಿ ನಡೆಯುತ್ತಿರುವ ಈ ರಾಸಾಯನಿಕ ಕ್ರಿಯೆಗಳು ರಕ್ತ ಮತ್ತು ಮೂತ್ರ ಪರೀಕ್ಷೆಗಳಿಂದ ಅಳೆಯಬಹುದು. ಸ್ವಿಜರ್‌ಲೆಂಡ್ ಲೌಸಾನೆಯ ನೆಸ್ಟಲ್ ಸಂಶೋಧನೆ ಕೇಂದ್ರದ ಸುನಿಲ್ ಕೊಚಾರ್ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ಪ್ರೊ.ಜೆರಿಮಿ ನಿಕೋಲ್‌ಸನ್ ನಡೆಸಿದ ಪರೀಕ್ಷೆಗಳ ಪ್ರಕಾರ, ಈ ರಾಸಾಯನಿಕ ಕ್ರಿಯೆಗಳಿಂದ ಕೆಲವು ಜನರಲ್ಲಿ ಚಾಕ್‌ಲೇಟ್ ಬಗ್ಗೆ ಪ್ರೇಮ ಆವರಿಸಿದರೆ ಇನ್ನೂ ಕೆಲವರಲ್ಲಿ ಉದಾಸೀನತೆ ಇರುತ್ತದೆ ಎಂದು ಸಂಶೋಧಕರು ಪ್ರೋಟೋಂ ಸಂಶೋಧನೆ ಜರ್ನಲ್‌ನಲ್ಲಿ ಹೇಳಿದ್ದಾರೆಂದು ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ.

ಈ ಅಧ್ಯಯನವು 11 ಕಾರ್ಯಕರ್ತರನ್ನು ಒಳಗೊಂಡಿದ್ದು, ಚಾಕಲೇಟ್ ಇಚ್ಛಿತರು ಮತ್ತು ಚಾಕಲೇಟ್ ಉದಾಸೀನರು ಎಂದು ವರ್ಗೀಕರಿಸಲಾಗಿದೆ. ಕ್ಲಿನಿಕಲ್ ಅಧ್ಯಯನದಲ್ಲಿ ಸಾಮಾನ್ಯ ತೂಕದ ಎಲ್ಲರೂ ಚಾಕಲೇಟ್ ತಿಂದ ಬಳಿಕ ಅವರ ರಕ್ತ ಮತ್ತು ಮೂತ್ರದ ಮಾದರಿಗಳ ರಾಸಾಯನಿಕಗಳ ವಿಶ್ಲೇಷಣೆ ಮಾಡಲಾಯಿತು.

ಚಾಕಲೇಟ್ ಪ್ರಿಯರಲ್ಲಿ ಕಡಿಮೆ ಮಟ್ಟದ ಎಲ್‌‌ಡಿಎಲ್- ಕೊಲೆಸ್ಟರಾಲ್(ಕೆಟ್ಟ ಕೊಲೆಸ್ಟರಾಲ್) ಅಂಶವಿದ್ದರೆ ಅನುಕೂಲಕರ ಪ್ರೋಟೀನ್ ಆಲ್ಬುಮಿನ್ ಮಟ್ಟ ಗಮನಾರ್ಹ ಏರಿಕೆಯಾಗಿತ್ತು. ಚಾಕಲೇಟ್ ಮುಂತಾದ ಆಹಾರವನ್ನು ಒಡೆಯುವಲ್ಲಿ ಮುಖ್ಯಪಾತ್ರವಹಿಸುವ ಕರುಳಿನ ಸೂಕ್ಷ್ಮಜೀವಿಗಳ ಚಟುವಟಿಕೆ ಚಾಕಲೇಟ್‌ಪ್ರಿಯರಲ್ಲಿ ಭಿನ್ನವಾಗಿರುತ್ತದೆ.

ಚಾಕಲೇಟ್ ಇಷ್ಟಪಡುವ ಜನರಲ್ಲಿ ಕರುಳಿನ ಸೂಕ್ಷ್ಮ ಜೀವಿಗಳ ರಾಸಾಯನಿಕ ಕ್ರಿಯೆಯ ಪಾರ್ಶ್ವನೋಟವು ಚಾಕಲೇಟ್ ಇಷ್ಟಪಡದಿರುವ ಜನರಿಗಿಂತ ಉತ್ತಮವಾಗಿರುತ್ತದೆ ಎಂದು ಪ್ರೊ.ನಿಕೋಲ್‌ಸನ್ ತಿಳಿಸಿದ್ದಾರೆ.

ಚಾಕ್‌ಲೇಟ್‌ನ ಒಳ್ಳೆಯ ಪರಿಣಾಮಗಳ ಬಗ್ಗೆ ಪುನರುಚ್ಚರಿಸಿದ ಅವರು, ಚಾಕಲೇಟ್‌ನ ಅಗತ್ಯ ಅಂಶವಾದ ಕೋಕಾದಲ್ಲಿ ಫ್ಲೆವೊನೈಡ್ ಅಂಶ ಸಮೃದ್ಧವಾಗಿದೆ. ಚಾಕಲೇಟ್ ತಿನ್ನುವುದರಿಂದ ಕ್ಯಾಟೆಚಿನ್ ಮತ್ತು ಎಪಿಕ್ಯಾಟೆಚಿನ್ ರಕ್ತದಲ್ಲಿ ಸೇರಿ ಆಮ್ಲಜನಕದ ಸಂಯೋಗವನ್ನು ತಪ್ಪಿಸಿ ದೇಹ ಆರೋಗ್ಯವಾಗಿರಲು ಸಹಕಾರ ನೀಡುತ್ತದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ