ಸಂತೋಷದ ಜೀವನಕ್ಕೆ ಹೆದ್ದಾರಿ

ಮಂಗಳವಾರ, 18 ಡಿಸೆಂಬರ್ 2007 (21:04 IST)
1) ಮುಕ್ತ ಕೈ, ಮುಕ್ತ ಮನಸ್ಸು ಮತ್ತು ಮುಕ್ತ ಹೃದಯಿಯಾಗಿ ಜೀವಿಸಿರಿ

2)ಪ್ರತಿದಿನ ಕನಿಷ್ಠ ಮೂವರಿಗೆ ಅಭಿನಂದನೆ ಸಲ್ಲಿಸಿ.

3)ಸೂರ್ಯೋದಯವನ್ನು ವೀಕ್ಷಿಸಿ.

4) ಪರಿಚಿತರು ಸಿಕ್ಕಿದಾಗ ಹಲೋ ಎಂದು ನೀವೇ ಮೊದಲು ಹೇಳಿ.

5) ನಿಮ್ಮನ್ನು ಹೇಗೆ ನಡೆಸಿಕೊಳ್ಳಬೇಕೆಂದು ಭಾವಿಸುತ್ತೀರೊ ಹಾಗೆ ಬೇರೆಯವರಿಗೂ ಗೌರವ ಕೊಡಿ.

6) ಯಾರನ್ನೂ ಕಡೆಗಣಿಸಬೇಡಿ, ಪವಾಡಗಳೇ ನಡೆಯಬಹುದು.

7) ಹೆಸರು ಹಿಡಿದು ಕರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

8) ಕಠಿಣ ಮನಸ್ಸಿನ ಜತೆಗೆ ಮೃದು ಹೃದಯಿಯಾಗಿರಿ.

9) ಸಾಧ್ಯವಾದಷ್ಟು ಕರುಣಾಶಾಲಿಗಳಾಗಿ,

10)ಹೊಗಳಿಕೆಯು ವ್ಯಕ್ತಿಯ ಭಾವನಾತ್ಮಕ ಅಗತ್ಯವೆಂದು ಮರೆಯದಿರಿ.

11)ಆಶ್ವಾಸನೆಗಳನ್ನು ಉಳಿಸಿಕೊಳ್ಳಿ.


12) ಉಲ್ಲಾಸದ ಭಾವನೆ ಇಲ್ಲದಿದ್ದರೂ ಉಲ್ಲಾಸವನ್ನು ಪ್ರದರ್ಶಿಸಿ.

13) ರಾತ್ರೋರಾತ್ರಿ ಯಶಸ್ಸು ಸಾಮಾನ್ಯವಾಗಿ 15 ವರ್ಷಗಳನ್ನು ತೆಗೆದುಕೊಂಡಿರುತ್ತದೆ ಎನ್ನುವುದನ್ನು ಮರೆಯದಿರಿ.

14) ಅಪಜಯಿಗಳು ಮಾಡದೇ ಇರುವುದನ್ನು ವಿಜಯಿಗಳು ಮಾಡುತ್ತಾರೆಂದು ತಿಳಿಯಿರಿ.

15) ಹಾಸಿಗೆ ಇದ್ದಷ್ಟು ಕಾಲುಚಾಚಿ.

16) ನೀವು ಪ್ರೀತಿಸುವ ವ್ಯಕ್ತಿಗಳ ಬೆನ್ನಿಗೆ ತಿವಿಯಬೇಡಿ.

ವೆಬ್ದುನಿಯಾವನ್ನು ಓದಿ