ಬೆಳಗಾವಿಯ ಶತಾಯುಷಿ ಅಜ್ಜನಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ!

ಬುಧವಾರ, 21 ಡಿಸೆಂಬರ್ 2016 (11:26 IST)
ಮುಂಬೈ: ಇದು ನವಿ ಮುಂಬೈಯಲ್ಲಿ ನಡೆದ ಘಟನೆ. ಈ ಅಜ್ಜನಿಗೆ 101 ವರ್ಷ ವಯಸ್ಸು. ಸಾಧಾರಣವಾಗಿ ಈ ವಯಸ್ಸಿನಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಲು ನಿರಾಕರಿಸುತ್ತಾರೆ. ಆದರೆ ಮುಂಬೈಯ ಅಪೋಲೋ ಆಸ್ಪತ್ರೆಯಲ್ಲಿ ಹರ್ನಿಯಾ ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ.

ನಿವೃತ್ತ ತಹಶೀಲ್ದಾರ್ ಆಗಿದ್ದ ರಾಮಚಂದ್ರ ಎನ್ನುವವರು ಬೆಳಗಾವಿಯವರು.  ಸದ್ಯಕ್ಕೆ ನವಿ ಮುಂಬೈಯಲ್ಲಿ ನೆಲೆಸಿದ್ದಾರೆ. ಹರ್ನಿಯಾದಿಂದಾಗಿ ಅವರಿಗೆ ದೈನಂದಿನ ಕೆಲಸ ಮಾಡುವುದೂ ಕಷ್ಟವಾಗಿತ್ತು. ಹೀಗಾಗಿ ಅಜ್ಜನಿಗೆ ಶಸ್ತ್ರಚಿಕಿತ್ಸೆ ಮಾಡು ನಿರ್ಧರಿಸಿದವರು ಅಪೋಲೋ ಆಸ್ಪತ್ರೆಯ ಡಾ. ಶಾಲಿನ್ ದುಬೇ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಜಾಗರೂಕತೆಯಿಂದ ತಾತನಿಗೆ ಆಪರೇಷನ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಶತಾಯುಷಿ ಅಜ್ಜನ ಶಿಸ್ತು ಬದ್ಧ ಜೀವನದಿಂದಾಗಿ ಅವರು ಇನ್ನೂ ಆರೋಗ್ಯವಾಗಿರಲು ಸಾಧ್ಯವಾಗಿದೆಯಂತೆ. 63 ವರ್ಷ ಒಂದೇ ಒಂದು ರಜೆ ಪಡೆಯದೇ ಕೆಲಸ ಮಾಡಿದ್ದ ಖ್ಯಾತಿ ಅವರದ್ದು.

80 ವರ್ಷ ಮೇಲ್ಪಟ್ಟವರಿಗೆ ಹರ್ನಿಯಾ ಆಪರೇಷನ್ ಮಾಡಿಸುವುದು ಸುಲಭವಲ್ಲ. ತಾತ ರಾಮಚಂದ್ರ ಕೂಡಾ ಆಪರೇಷನ್ ಬೇಡ ಎನ್ನುತ್ತಿದ್ದರಂತೆ. ಆದರೆ ಬೇರೆ ದಾರಿಯಿಲ್ಲದೆ ಶತಾಯುಷಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ