ಹಾಲಿನ ಜತೆ ಇವೆರಡನ್ನು ಸೇರಿಸಿದರೆ ನಡೆಯುವ ಮ್ಯಾಜಿಕೇ ಬೇರೆ!

ಶುಕ್ರವಾರ, 26 ಮೇ 2017 (10:54 IST)
ಬೆಂಗಳೂರು: ಪ್ರತಿದಿನ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ? ಹಾಗಿದ್ದರೆ, ಹಾಲಿನ ಜತೆ ಇವೆರಡು ವಸ್ತುಗಳನ್ನೂ ಸೇರಿಸಿ ಕುಡಿದು ನೋಡಿ. ನಮ್ಮ ಆರೋಗ್ಯಕ್ಕೆ ಇದು ಕೊಡುವ ಕೊಡುಗೆ ಅಪಾರ.

 
ಅರಸಿನ ಮತ್ತು ಕಾಳುಮೆಣಸಿನ ಪುಡಿ. ಇವೆರಡನ್ನು ಹಾಲಿನ ಜತೆ ಸೇವಿಸುತ್ತಿದ್ದರೆ, ಶೀತ, ಕಫ ಸಂಬಂಧಿ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಸಿಗುತ್ತದೆ. ಇದೀಗ ಪಾಶ್ಚಾತ್ಯರಿಗೂ ಪ್ರಿಯವಾಗಿದೆ.

ಇಷ್ಟೇ ಅಲ್ಲ ಪ್ರತಿ ದಿನ ಹಾಲಿನ ಜತೆ ಇವೆರಡನ್ನು ಸೇರಿಸಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಆಲ್ ಝೈಮರ್ ರೋಗ, ಹೊಟ್ಟೆ ಹುಣ್ಣಿನಂತಹ ಸಮಸ್ಯೆಯಿಂದ ಪರಿಹಾರ ನೀಡುವುದಲ್ಲದೆ, ಸ್ಮರಣ ಶಕ್ತಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

ಹಾಗಾಗಿ ಹಾಲಿನ ಜತೆಗೆ ಅಂಗಡಿಯಲ್ಲಿ ಏನೇನೋ ಪದಾರ್ಥಗಳನ್ನು, ಶಕ್ತಿ ವರ್ಧಕಗಳನ್ನು ಸೇರಿಸಿ ಕುಡಿಯುವ ಬದಲು, ಅರಸಿನ ಪುಡಿ, ಕಾಳುಮೆಣಸಿನ ಪುಡಿ ಮತ್ತು ಸಿಹಿ ಬೇಕಿದ್ದರೆ, ಕೊಂಚ ಕಲ್ಲು ಸಕ್ಕರೆ ಸೇರಿಸಿ ಕುಡಿದು ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ