ಹೆರಿಗೆಯ ನಂತರ ಮಹಿಳೆಯರು ಲೈಂಗಿಕಾಸಕ್ತಿಯನ್ನು ಮರಳಿ ಪಡೆಯಲು ಈ ಸಲಹೆಗಳನ್ನು ಅನುಸರಿಸಿ
ಬುಧವಾರ, 21 ಫೆಬ್ರವರಿ 2018 (06:47 IST)
ಬೆಂಗಳೂರು : ಮಗುವಿಗೆ ಜನ್ಮ ನೀಡುವುದು ಮಹಿಳೆಯರ ಬಾಳಿನ ಅತ್ಯಂತ ಸಂತೋಷಕರವಾದ ಘಳಿಗೆಯಾಗಿರುತ್ತದೆ. ಆದರೆ ಈ ಘಳಿಗೆಯು ಮಹಿಳೆಯರ ಬಾಳಿನಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತದೆ. ಹೆರಿಗೆಯ ನಂತರ ಮಹಿಳೆಯರು ಲೈಂಗಿಕಾಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಕಾಮಾಸಕ್ತಿಯನ್ನು ಮರಳಿ ಮೊದಲಿನಂತೆ ಪಡೆಯಲು ಕೆಲವು ಸಲಹೆಗಳನ್ನು ಅನುಸರಿಸಿ
*ಮಗುವಿನ ಲಾಲನೆ ಮತ್ತು ಪಾಲನೆಗೆ ಹೆಚ್ಚು ಗಮನ ನೀಡುವ ಮಹಿಳೆಯರು ತುಂಬಾ ಸುಸ್ತಾಗುತ್ತಾರೆ. ಇದರಿಂದ ಅವರು ಲೈಂಗಿಕಾಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇದನ್ನು ನಿವಾರಿಸಲು ನಿಮ್ಮ ಸಂಗಾತಿಯ ನೆರವನ್ನು ಪಡೆದುಕೊಳ್ಳಿ.
*ಮಗುವಾದ ಕೂಡಲೆ ಸಂಗಾತಿಯನ್ನು ಅವರ ತವರು ಮನೆಯಲ್ಲಿ ಬಿಟ್ಟು ಗಂಡನಾದವನು ದೂರವಿರುತ್ತಾರೆ. ಆದರೆ ಹಾಗೆ ಮಾಡದೆ, ಹೋಗಿ ಅವರನ್ನು ಮಾತನಾಡಿ. ಇಲ್ಲವಾದರೆ ಕನಿಷ್ಠ ಪೋನಿನ ಮೂಲಕ ಅವರ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳಿ. ಇದರಿಂದ ನೀವಿಬ್ಬರೂ ಮುಖಾಮುಖಿಯಾದಾಗ ಆ ಸಂತಸವೇ ನಿಮ್ಮಲ್ಲಿ ಕಾಮಾಸಕ್ತಿಯನ್ನು ಕೆರಳಿಸುತ್ತದೆ.
*ಇಬ್ಬರೂ ಲೈಂಗಿಕ ಕ್ರಿಯೆ ನಡೆಸುವಂತಹ ಸಂದರ್ಭ ಬಂದಾಗ ಆತುರ ಪಡಬೇಡಿ ಅಥವಾ ಒತ್ತಡಕ್ಕೆ ಒಳಗಾಗಬೇಡಿ. ನಿಧಾನವಾಗಿ ಮುಂದುವರಿಯಿರಿ. ಒಬ್ಬರಿಗೊಬ್ಬರು ಸಹಾಯ ಮಾಡಿ,
*ಒಂದು ವೇಳೆ ನಿಮ್ಮ ಕಾಮಾಸಕ್ತಿ ಕಡಿಮೆ ಆಗಿದ್ದಲ್ಲಿ ವೈದ್ಯರ ಬಳಿ ಚರ್ಚಿಸಿ. ಕೆಲವೊಮ್ಮೆ ಒತ್ತಡಕ್ಕೆ ಒಳಗಾದಾಗ ನಿಮಗೆ ಕಾಮಾಸಕ್ತಿ ಕಡಿಮೆಯಾಗಬಹುದು. ಇದನ್ನು ವೈದ್ಯರ ಬಳಿ ಚರ್ಚಿಸಿ ತಿಳಿದುಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ