ಮದ್ಯಪಾನಿಗಳೇ ಎಚ್ಚರ! ಹೃದಯ ಜೋಪಾನ ಮಾಡಿಕೊಳ್ಳಿ

ಬುಧವಾರ, 4 ಜನವರಿ 2017 (09:26 IST)
ಬೆಂಗಳೂರು: ಮದ್ಯಪಾನ ಎನ್ನುವುದು ಬಿಡಲಾರದ ಚಟ. ಆದರೆ ಈ ಚಟ ನಿಮ್ಮ ಹೃದಯ ಹಾಳು ಮಾಡುವುದು ಖಂಡಿತಾ. ಹೀಗೆಂದು ಹೊಸದೊಂದು ಸಂಶೋಧನೆ ಹೇಳಿದೆ.

ಮದ್ಯಪಾನ ಅತಿಯಾದರೆ, ಹೃದಯಾಘಾತವಾಗುವ ಸಂಭವ ಹೆಚ್ಚು ಎಂದು ನೂತನ ಅಧ್ಯಯನ ತಿಳಿಸಿದೆ. ಇದು ಮಾತ್ರವಲ್ಲ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಜತೆಗೇ ಬರುತ್ತದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರು ಕಂಡುಕೊಂಡಿದ್ದಾರೆ.

14.7 ಮಿಲಿಯನ್ ಜನರ ಮೇಲೆ ಅಧ್ಯಯನ ನಡೆಸಿ ಸಂಶೋಧಕರು ಈ ಸತ್ಯ ಪತ್ತೆ ಮಾಡಿದ್ದಾರೆ. ಹೃದಯಾಘಾತ ಮಾತ್ರವಲ್ಲದೆ, ಹೃದಯ ವೈಫಲ್ಯ ಸಮಸ್ಯೆಗಳೂ ಕಂಡುಬರುವ ಸಾಧ್ಯತೆ ಹೆಚ್ಚು ಎಂದು ಪತ್ತೆ ಮಾಡಲಾಗಿದೆ.

ಕೆಲವರು ತಮ್ಮ ಹೃದಯ ಗಟ್ಟಿಯಾಗುತ್ತದೆಂಬ ತಪ್ಪು ಕಲ್ಪನೆಯಿಂದ ಅತಿಯಾಗಿ ಮದ್ಯ ಸೇವಿಸುತ್ತಾರೆ. ಆದರೆ ಈ ಸಂಶೋಧನೆಯಿಂದಾದರೂ ಜನರು ಎಚ್ಚೆತ್ತುಕೊಂಡು, ತಮ್ಮ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ಸಂಶೋಧಕರು ಆಶಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ