ಪ್ರಶ್ನೆ: ಸರ್, ನಾನು ಖಾಸಗಿ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನಾನು ಪದವಿ ಓದುತ್ತಿರುವಾಗ ಪಕ್ಕದ ಮನೆಯಲ್ಲಿದ್ದ ಪಿಯು ಓದುತ್ತಿದ್ದ ಯುವತಿಯನ್ನು ಇಷ್ಟಪಟ್ಟಿದ್ದೆ. ಅವಳೂ ಇಷ್ಟಪಟ್ಟಿದ್ದರೂ ಹೇಳಿರಲಿಲ್ಲ.
ಅವರ ಮನೆಯಲ್ಲಿ ವಿಷಯ ಗೊತ್ತಾಗಿ ನನ್ನ ಕೈಗೆ ಅವಳಿಂದ ರಕ್ಷಾ ಬಂಧನ ಕಟ್ಟಿಸಿದ್ದರು. ಆ ಬಳಿಕ ನಾನು ಅವಳಿಂದ ದೂರವೇ ಉಳಿದಿದ್ದೆ. ಆ ಬಳಿಕ ಮುಂಬೈಗೆ ಹೋಗಿ ವಿದ್ಯಾಭ್ಯಾಸ ಮಾಡಿದ ಬಳಿಕ ಈಗ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ. ನಿರುದ್ಯೋಗಿಯಾಗಿದ್ದ ರಾಖಿ ಕಟ್ಟಿದ ಆ ಯುವತಿ ಪದೇ ಪದೇ ನನ್ನ ಭೇಟಿ ಮಾಡಿ ಕೆಲಸ ಕೊಡಿಸುವಂತೆ ಕೇಳಿದ್ದಳು. ನಾನು ಹಳೆಯದನ್ನು ಮರೆತು ನನ್ನ ಕಚೇರಿಯಲ್ಲಿಯೇ ಕೆಲಸ ಕೊಡಿಸಿರುವೆ.
ಆದರೆ ಆಕೆ ನನ್ನ ಕೊಠಡಿಗೆ ಪದೇ ಪದೇ ಬಂದು ಮೈ ಮೇಲೆ ಬೀಳುತ್ತಿದ್ದಾಳೆ. ಮೊದಲೇ ಇಷ್ಟ ಪಟ್ಟ ಹುಡುಗಿ ಅಂತ ನಾನು ಅವಳನ್ನು ಅನುಭವಿಸಿದೆ. ಸಮಯ ಸಿಕ್ಕಾಗಲೆಲ್ಲಾ ಅವಳ ಜತೆ ಒಂದಾಗುತ್ತಿರುವೆ. ಆದರೆ ರಾಖಿ ಕಟ್ಟಿರುವ ಹುಡುಗಿಯೇ ಈಗ ತಾಳಿ ಕಟ್ಟು ಅನ್ನುತ್ತಿದ್ದಾಳೆ. ಮುಂದೇನು ಮಾಡಬೇಕು ಗೊತ್ತಾಗುತ್ತಿಲ್ಲ.
ಉತ್ತರ: ಉತ್ತಮ ಬಾಂಧವ್ಯದ ಸಂಬಂಧಗಳಿಗೆ ನಿಜವಾದ ಬೆಲೆ ಕೊಡೋರು ಕಡಿಮೆಯೇ. ನೀವು ಮನಸ್ಸಿನಲ್ಲಿ ಅವಳ ಬಗ್ಗೆ ಒಲವು ಇಟ್ಟುಕೊಂಡು ಅವಳಿಂದ ರಾಖಿ ಕಟ್ಟಿಸಿಕೊಳ್ಳಬಾರದಿತ್ತು.
ಆ ಬಳಿಕವಾದರೂ ನೀವು ಅವಳ ರಾಖಿಗೆ ಬೆಲೆ ಕೊಡಬೇಕಿತ್ತು. ನೀವು ಸಂಬಂಧಗಳನ್ನು ಮೀರಿ ಒಂದಾಗಿ ಸುಖಿಸಿದ್ದೀರಿ. ಅವಳಿಗೆ ಬಾಳುಕೊಡಿ. ಸುಖವಾಗಿರಿ. ಅವಳ ಮನೆಯಲ್ಲಿನ ಹಿರಿಯರನ್ನು ಮದುವೆಗೆ ಒಪ್ಪಿಸಿ.