ಬೆಂಗಳೂರು : ಹೆಚ್ಚಿನ ಮಹಿಳೆಯರಿಗೆ ತಮ್ಮ ಚರ್ಮ ಹೊಳೆಯುತ್ತಿರಬೇಕು, ಅಂದವಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಅಂತವರು ಮುಖದ ಚರ್ಮದ ಹೊಳಪು ಹೆಚ್ಚಿಸಲು ಈ ಫೇಸ್ ಪ್ಯಾಕ್ ಬಳಸಿ.
ಪಪ್ಪಾಯಿ ಉತ್ಕರ್ಷಣ ನಿರೋಧಕಗಳ ಗುಣಗಳನ್ನು ಹೊಂದಿದೆ. ಇದು ಚರ್ಮದ ಮೈಬಣ್ಣವನ್ನು ಬಿಳಿಯಾಗಿಸುತ್ತದೆ. ಹಾಗಾಗಿ 2 ಚಮಚ ನೆಲ್ಲಿಕಾಯಿ ಪುಡಿಗೆ, 2 ಚಮಚ ಪಪ್ಪಾಯಿ ತಿರುಳು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ, ಇದನ್ನು ವಾರಕ್ಕೊಮ್ಮೆ ಮಾಡಿದರೆ ನಿಮ್ಮ ಚರ್ಮದ ಕಾಂತಿ ಹೆಚ್ಚಾಗುತ್ತದೆ.