ಮುಟ್ಟಿದರೆ ಮುನಿ ಸಸ್ಯ ಆರೋಗ್ಯಕ್ಕೆ ಎಷ್ಟು ಲಾಭದಾಯಕ ಗೊತ್ತಾ...?
ಮಂಗಳವಾರ, 1 ಮೇ 2018 (07:16 IST)
ಬೆಂಗಳೂರು : ಒಂದೊಂದು ಸಸ್ಯ ಪ್ರಭೇದಗಳು ಒಂದೊಂದು ರೀತಿಯಲ್ಲಿ ಆರೋಗ್ಯಕರ ಗುಣಗಳನ್ನು ಹೊಂದಿರುತ್ತವೆ , ಆದರೆ ಅದು ಕೆಲವರಿಗೆ ಮಾತ್ರ ಅದರ ಮಹತ್ವ ತಿಳಿದಿರುತ್ತದೆ. ಅದೇರೀತಿ ಮುಟ್ಟಿದರೆ ಮುನಿ ಸಸ್ಯವು ಹಲವಾರು ಬೇನೆಗಳ ನಿವಾರಕ ಎನ್ನಲಾಗುತ್ತದೆ.
ಈ ಸಸ್ಯದ ಹಲವಾರು ಆರೋಗ್ಯಕಾರಿ ಗುಣಗಳು ಇಲ್ಲಿವೆ ನೋಡಿ.
*ಮುಟ್ಟಿದರೆ ಮುನಿ ಸಸ್ಯದ ಎಲ್ಲಾ ಭಾಗವೂ ಮನೆ ಔಷಧಿ ತಯಾರಿಕೆಗೆ ಬಹಳ ಉಪಯುಕ್ತವಾದುದು. ಗಂಟಲು ಬಾವು ಮತ್ತು ಇತರೆ ಬಾವುಗಳಿಂದ ತೊಂದರೆ ಅನುಭವಿಸುತ್ತಿರುವವರು ಇದರ ಕಾಂಡ, ಎಲೆಯನ್ನು ಚೆನ್ನಾಗಿ ಅರೆದು ಬಾವು ಆಗಿರುವ ಜಾಗದಲ್ಲಿ ಪಟ್ಟು ಹಾಕಬೇಕು.
*ಇದರಿಂದ ನೋವು ಮತ್ತು ಬಾವಿನಿಂದಾದ ಊತದ ಉಪಶಮನ ಸಾಧ್ಯವಾಗುತ್ತದೆ. ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಕುಡಿಸುವುದು ಮಂಡಿನೋವು, ಮಂಡಿ ಊತ, ಮಲಬದ್ಧತೆ, ಮೂತ್ರಪಿಂಡ ಹಾಗೂ ಲಿವರ್‌ನ ತೊಂದರೆಗೆ ಉತ್ತಮ ಔಷಧ.
*ಸಾಮಾನ್ಯ ಶೀತವಾದರೆ ಇದು ಒಳ್ಳೆಯ ಮದ್ದು. ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೆ ಇದರ ಎಲೆಯನ್ನು ಜಜ್ಜಿ ರಸ ಹಚ್ಚಿದರೆ ರಕ್ತ ಸೋರುವುದು ನಿಲ್ಲುತ್ತದೆ. ಗಾಯ ಬೇಗನೆ ವಾಸಿಯಾಗುತ್ತದೆ.
*ಮೂಲವ್ಯಾಧಿ, ಕಾಲರಾ ಮತ್ತು ಸಾಮಾನ್ಯ ವಾಂತಿಭೇದಿಗೂ ಉತ್ತಮ ಔಷಧಿ. ಚರ್ಮ ವ್ಯಾಧಿಯನ್ನೂ ಕಡಿಮೆ ಮಾಡುತ್ತದೆ. ಕೆಲವೊಂದು ಸ್ತ್ರೀ ರೋಗಕ್ಕೂ ಉತ್ತಮ ಮದ್ದು. ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ