ಮಗುವಾದ ಮೇಲೆ ಮಹಿಳೆಯರು ಈ 5 ಜನರನ್ನು ದ್ವೇಷಿಸುತ್ತಾರಂತೆ. ಯಾಕೆ ಗೊತ್ತಾ?
ಶುಕ್ರವಾರ, 3 ಮೇ 2019 (07:07 IST)
ಬೆಂಗಳೂರು : ಪ್ರತಿಯೊಬ್ಬ ಮಹಿಳೆಗೂ ಮಗುವಾದ ಮೇಲೆ ಅವರ ಜವಬ್ದಾರಿ ಹೆಚ್ಚಾಗುತ್ತದೆ. ಇದರಿಂದ ಅವರು ತಮ್ಮ ಹೆಚ್ಚಿನ ಗಮನವನ್ನು ಮಗುವಿನ ಕಡೆಗೆ ನೀಡಬೇಕಾಗುತ್ತದೆ. ಆದ್ದರಿಂದ ಆ ವೇಳೆ ಅವರು ಈ 5 ಜನರನ್ನು ದ್ವೇಷಿಸಲು ಶುರು ಮಾಡುತ್ತಾರೆ. ಅವರು ಯಾರ್ಯಾರು ಎಂಬುದನ್ನು ನೋಡೋಣ.
*ಮೊದಲನೇಯದಾಗಿ ಅನಾರೋಗ್ಯ ಪೀಡಿತ ಜನರನ್ನು ಕೆಲವು ತಾಯಂದಿರೂ ಮಗುವಿನಿಂದ ದೂರವಿಡಿಸಲು ಪ್ರಯತ್ನಿಸುತ್ತಾರೆ. ಕಾರಣ ಮಗುವಿಗೆ ಯಾವುದೇ ರೀತಿಯ ಇನ್ ಫೆಕ್ಷನ್ ಆಗಬಾರದು ಎಂದು.
*ಎರಡನೇಯದಾಗಿ ಬಾಗಿಲ ಬಳಿ ತುಂಬಾ ಶಬ್ದ ಮಾಡುವವರನ್ನು ತಾಯಂದಿರೂ ದ್ವೇಷಿಸುತ್ತಾರೆ. ಕಾರಣ ಅವರ ಮಾಡುವ ಶಬ್ದದಿಂದ ಮಗುವಿನ ನಿದ್ದೆ ಹಾಳಾಗುತ್ತದೆ ಎಂದು.
*ಮೂರನೇಯದಾಗಿ ತಿಳಿಸದೆ ಮನೆಗೆ ಬರುವ ಅತಿಥಿಗಳನ್ನು ತಾಯಂದಿರೂ ಹೆಚ್ಚಾಗಿ ದ್ವೇಷಿಸುತ್ತಾರೆ. ಕಾರಣ ಅತಿಥಿಗಳಿಗೆ ಆತಿಥ್ಯ ನೀಡುವುದರೊಳಗೆ ಮಗುವನ್ನು ಕೇರ್ ಮಾಡಲು ಅವರಿಗೆ ಸಮಯ ಇಲ್ಲದ ಕಾರಣ ಕೋಪಗೊಳ್ಳುತ್ತಾರೆ.
*ನಾಲ್ಕನೇಯದಾಗಿ ನಿದ್ದೆ ಮಾಡುತ್ತಿರುವ ಪತಿ. ಮಗು ಎಷ್ಟೇ ಅತ್ತರು ಅದನ್ನು ಸಮಾಧಾನ ಪಡಿಸದೆ ಚೆನ್ನಾಗಿ ನಿದ್ದೆ ಮಾಡುವ ಪತಿಯನ್ನು ತಾಯಂದಿರು ದ್ವೇಷಿಸುತ್ತಾರೆ.
*ಐದನೇಯದಾಗಿ ತಡವಾಗಿ ಭೇಟಿ ಮಾಡುವ ಸ್ನೇಹಿತರನ್ನು ತಾಯಂದಿರೂ ಬೇಗನೆ ಕೋಪಿಸುಕೊಳ್ಳುತ್ತಾರೆ. ಸ್ನೇಹಿತರು ಹೇಳಿದ ಸಮಯಕ್ಕೆ ಬಾರದೆ ತಡವಾಗಿ ಬಂದರೆ ಮಗುವಿನ ಕಡೆಗೆ ಗಮನ ಕೊಡಲು ಆಗಲಿಲ್ಲವಲ್ಲ ಎಂದು ಕೋಪಿಸಿಕೊಳ್ಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.