ಬೆನ್ನು ನೋವೇ? ಈ ಸುಲಭ ಉಪಾಯಗಳನ್ನು ಮಾಡಿ ನೋಡಿ

ಸೋಮವಾರ, 23 ಜನವರಿ 2017 (11:26 IST)
ಬೆಂಗಳೂರು: ಇತ್ತೀಚೆಗೆ ಯುವಕರಿಂದ, ವಯೋವೃದ್ಧರವರೆಗೆ ಎಲ್ಲರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ ಬೆನ್ನು ಹಾಗೂ ಸೊಂಟ ನೋವು. ಬಂದರೆ ಬೇಗನೇ ವಾಸಿಯಾಗದೆ ಆಗಾಗ ಬಿಡದೇ ಕಾಡುವ ಖಾಯಿಲೆ ಇದು. ಇದು ಬಂದಾಗ ನಾವು ಮನೆಯಲ್ಲೇ ಮಾಡಬಹುದಾದ ಕೆಲವು ಪರಿಹಾರಗಳು ಇಲ್ಲಿವೆ ನೋಡಿ.

 
ಸಾಮಾನ್ಯವಾಗಿ ನಾವು ಕುಳಿತುಕೊಳ್ಳುವ, ಕೆಲಸ ಮಾಡುವ ಭಂಗಿಯಿಂದಲೇ ಬೆನ್ನು ನೋವು ಬರುವುದು. ಇದಕ್ಕಾಗಿ ಸರಳ ವ್ಯಾಯಾಮ ಮಾಡಬಹುದು. ಅಂಗಾತ ಮಲಗಿ ಕಾಲಿನ ಮಾಂಸ ಖಂಡಗಳನ್ನು ಒಮ್ಮೆ ಬಿಗಿಯಾಗಿ ಹಿಡಿದು ನಂತರ ಸಡಿಲಗೊಳಿಸಿ. ಇದಲ್ಲದಿದ್ದರೆ, ನಿಧಾನವಾಗಿ ನಡೆದಾಡಿ ವ್ಯಾಯಾಮ ಮಾಡಬಹುದು.

ಕೆಲವೊಮ್ಮೆ ಸರಿಯಾಗಿ ನಿದ್ರೆಯಿಲ್ಲದೇ, ವಿಶ್ರಾಂತಿಯಿಲ್ಲದೇ ಬೆನ್ನು ನೋವು ಬರುವುದಿದೆ. ಇದಕ್ಕಾಗಿ ಅಂಗಾತ ಮಲಗಿ ಚೆನ್ನಾಗಿ ನಿದ್ರೆ ಮಾಡಿ. ತಲೆದಿಂಬು ಜಾಸ್ತಿ ಎತ್ತರ ಹಾಕಿಕೊಳ್ಳದೇ ದೇಹ ಸಮಾನಂತರವಾಗಿರುವಂತೆ ನೋಡಿಕೊಂಡು ವಿಶ್ರಾಂತಿ ತೆಗೆದುಕೊಳ್ಳಿ.  ಬರೀ ನೆಲದಲ್ಲಿ ಮಲಗುವುದೂ ಒಳ್ಳೆಯದಲ್ಲ, ಹಾಗೆಯೇ ದಪ್ಪ ಬೆಡ್ ಮೇಲೆ ಮಲಗುವುದೂ ಒಳ್ಳೆಯದಲ್ಲ.

ನೋವು ಬಂತೆಂದು ಸೊಂಟವನ್ನು ಸ್ವಲ್ಪವೂ ಅಲುಗಾಡಿಸದೇ ಇರಬೇಡಿ. ಇದರಿಂದ ಮುಂದೆ ಕಷ್ಟವಾಗಬಹುದು. ಸರಳವಾಗಿ ಸಾಧ್ಯವಾದ ರೀತಿಯಲ್ಲಿ ಆ ಭಾಗಕ್ಕೆ ಚಟುವಟಿಕೆ ನೀಡಿ. ಹೆಚ್ಚು ಬೆನ್ನಿಗೆ ಒತ್ತಡ ಬೀಳುವಂತೆ, ಕೂರುವುದು, ಕೆಲಸ ಮಾಡುವುದನ್ನು ತಪ್ಪಿಸಿ.

ಬೆನ್ನು ನೋವು ಬಂತೆಂದು ಎಣ್ಣೆ ಅಥವಾ ನೋವಿನ ಕ್ರೀಂ ಹಚ್ಚಿ ಅಸಂಜಸವಾಗಿ ಅತಿಯಾಗಿ ಮಸಾಜ್ ಮಾಡಬೇಡಿ. ಇದರಿಂದ ಮಾಂಸಖಂಡಗಳಿಗೆ ಇನ್ನಷ್ಟು ಗಾಯವಾಗಬಹುದು. ಹದವಾಗಿ ಮಸಾಜ್ ಮಾಡಿಕೊಂಡು, ಬಿಸಿ ನೀರಿನಲ್ಲಿ ಮಸಾಜ್ ಮಾಡಿಕೊಳ್ಳಿ. ಸ್ವಲ್ಪ ರಿಲ್ಯಾಕ್ಸ್ ಆಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ