ಬಾದಾಮಿ ಎಣ್ಣೆಯಿಂದ ಬಾಡಿ ಮಸಾಜ್ ಮಾಡಿದರೆ ಪ್ರಯೋಜನಗಳು

Krishnaveni K

ಶನಿವಾರ, 16 ಮಾರ್ಚ್ 2024 (09:32 IST)
Photo Courtesy: Twitter
ಬೆಂಗಳೂರು: ಬೇಸಿಗೆಯಲ್ಲಿ ಬಾಡಿ ಹೀಟ್ ಆದಾಗ ಕೂದಲು ಮತ್ತು ಮೈಗೆ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡುವುದರಿಂದ ದೇಹ ತಂಪಾಗುವುದಲ್ಲದೆ, ಗಟ್ಟಿಮುಟ್ಟಾಗುತ್ತದೆ.

ಕೆಲವರು ಕೊಬ್ಬರಿ ಎಣ್ಣೆ ಮತ್ತೆ ಕೆಲವರು ಎಳ್ಳೆಣ್ಣೆ ಹಚ್ಚಿ ಬಾಡಿ ಮಸಾಜ್ ಮಾಡಬಹುದು. ಇವೆರಡರಿಂದಲೂ ಬಾಡಿ ಮಸಾಜ್ ಮಾಡುವುದರಿಂದ ಸಮಸ್ಯೆಯೇನೂ ಇಲ್ಲ. ಆದರೆ ಎಲ್ಲಕ್ಕಿಂತ ಒಳ್ಳೆಯದು ಬಾದಾಮಿ ಎಣ್ಣೆ. ಬಾದಾಮಿ ಎಣ್ಣೆಯ ಮಸಾಜ್ ಮಾಡುವುದು ಪುರುಷ ಮತ್ತು ಮಹಿಳೆಯರಿಗೆ ಉತ್ತಮ. ಹಾಗಿದ್ದರೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಏನು ಉಪಯೋಗ ನೋಡೋಣ.

ಬಾದಾಮಿ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡು ಮಸಾಜ್ ಮಾಡುವುದರಿಂದ ನೆತ್ತಿ ತಂಪಾಗುವುದಲ್ಲದೆ, ಮೆದುಳಿನ ಸಾಮರ್ಥ್ಯ ಹೆಚ್ಚಾಗುತ್ತದೆ. ಬಾದಾಮಿ ಎಣ್ಣೆ ಹುಮ್ಮಸ್ಸು ಕೊಡುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ ಅಂಶ ಹೇರಳವಾಗಿದ್ದು, ಇದರಿಂದ ಚರ್ಮಕ್ಕೂ ಉತ್ತಮ.

ವಿಟಮಿನ್ ಇ ಅಂಶ ಕೂದಲು ಬೆಳವಣಿಗೆಗೂ ಸಹಕಾರಿ. ಅಲ್ಲದೆ, ತಲೆಹೊಟ್ಟು, ಕೂದಲು ಸೀಳುವಿಕೆ, ಕೂದಲು ಉದುರುವಿಕೆ ಇತ್ಯಾದಿ ಸಮಸ್ಯೆಗಳು ಪರಿಹಾರವಾಗಬೇಕೆಂದರೂ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ