ಮಂಚಕ್ಕೆ ಕರೆಯುವ ಬಾಯ್ ಫ್ರೆಂಡ್ ಬಗ್ಗೆ ಎಚ್ಚರವಿರಲಿ!

ಸೋಮವಾರ, 17 ಜುಲೈ 2017 (09:47 IST)
ಬೆಂಗಳೂರು: ಹದಿ ಹರೆಯದ ವಯಸ್ಸು.. ಜತೆಗೊಬ್ಬ ಜೋಡಿ ಬೇಡುವ ಕಾಲ. ಇತ್ತೀಚೆಗಿನ ದಿನಗಳಲ್ಲಿ ಬಾಯ್ ಫ್ರೆಂಡ್, ಡೇಟಿಂಗ್ ಎಲ್ಲಾ ಕಾಮನ್. ಆದರೆ ಡೇಟಿಂಗ್ ಮಾಡುವ ಮುನ್ನ ಬಾಯ್ ಫ್ರೆಂಡ್ ಗಳ ಬಗ್ಗೆ ಯುವತಿಯರು ಎಚ್ಚರವಾಗಿರಬೇಕು.


ಆತನ ಬಗ್ಗೆ ತಿಳಿದುಕೊಳ್ಳಿ
ಬಾಯ್ ಫ್ರೆಂಡ್ ಆಯ್ಕೆಗೂ ಮೊದಲು ಆತನ ಹಿನ್ನಲೆ ತಿಳಿದುಕೊಳ್ಳಿ. ಆತ ಡೇಟಿಂಗ್ ಗೆ ಕರೆಯುವ ಉದ್ದೇಶ ತಿಳಿದುಕೊಳ್ಳಿ. ಆತ ಒಳ್ಳೆಯವನಾಗಿದ್ದರೆ ಪರವಾಗಿಲ್ಲ. ಸದಾ ಪೋಲಿ ಮಾತನಾಡುವ, ಹುಡುಗಿಯರ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ವ್ಯಕ್ತಿಗಳೊಂದಿಗೆ ಸ್ನೇಹ ಒಳ್ಳೆಯದಲ್ಲ.

ಇಷ್ಟ ಕಷ್ಟಗಳ ಬಗ್ಗೆ ಪ್ರಾಮಾಣಿಕರಾಗಿರಿ
ನಿಮಗೆ ಇಷ್ಟವಿಲ್ಲದ್ದನ್ನು ಆತನ ಮುಖಕ್ಕೇ ಹೇಳುವಷ್ಟು ಬೋಲ್ಡ್ ಆಗಿರಿ. ಆತನ ಒತ್ತಾಯಕ್ಕೆ ಕಟ್ಟು ಬಿದ್ದೋ, ಆತ ಏನಾದರೂ ತಿಳಿದುಕೊಂಡರೇ ಎಂಬ ಹಿಂಜರಿಯಕೆಯಿಂದಲೋ ಆತ ಮಾಡುವುದೆಲ್ಲವನ್ನೂ ಸಹಿಸಿಕೊಳ್ಳಬೇಕೆಂದಿಲ್ಲ. ಉದಾಹರಣೆಗೆ ಒಂಟಿಯಾಗಿ ಕೈಗೆ ಸಿಕ್ಕಾಗ ನಿಮ್ಮ ಜತೆ ಮಿತಿ ಮೀರಿದ ಸಲುಗೆ ತೆಗೆದುಕೊಳ್ಳವುದು ನಿಮಗೆ ಇಷ್ಟವಿಲ್ಲದಿದ್ದರೆ ನೇರವಾಗಿ ಹೇಳಿಬಿಡಿ.

ಪಾನೀಯಗಳು, ಆಹಾರಗಳು
ಕ್ಯಾಂಡಲ್ ಲೈಟ್ ಡಿನ್ನರ್ ಮಾಡೋಣವೆಂದು ನಿಮ್ಮ ಎದುರು ಅಷ್ಟುದ್ದದ ತಿಂಡಿ, ಪಾನೀಯಗಳನ್ನು ಎದುರಿಗಿಟ್ಟರೆ, ಕಣ್ಣು ಮುಚ್ಚಿ ಸವಿಯಬೇಡಿ. ಅಲ್ಲಿ ಆಲ್ಕೋಹಾಲ್ ಅಂಶಗಳಿರುವ ಆಹಾರವಿದೆಯೇ ಎಂದು ಪರೀಕ್ಷಿಸಿ. ಮದ್ಯದ ಮತ್ತಿನಲ್ಲಿ ಮೈ ಮರೆಯಬೇಡಿ.

ಮಂಚಕ್ಕೆ ಕರೆಯುವ ಬಾಯ್ ಫ್ರೆಂಡ್ ಬಗ್ಗೆ ಎಚ್ಚರ
ಇನ್ನು ಡೇಟಿಂಗ್ ನೆಪದಲ್ಲಿ ಒಂಟಿಯಾಗಿ ಸಿಕ್ಕುವ ತಾಣಗಳಿಗೆ ಕರೆದೊಯ್ದು ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಬಾಯ್ ಫ್ರೆಂಡ್ ಬಗ್ಗೆ ಎಚ್ಚರ. ಹದಿ ಹರೆಯದ ವಯಸ್ಸಿನಲ್ಲಿ ಮೈ ಮರೆತು ನಡೆದುಕೊಂಡರೆ ಮುಂದೆ ಬಹಳ ಪಶ್ಚಾತ್ತಾಪ ಪಡಬೇಕಾದೀತು.

ಡೇಟಿಂಗ್ ಎನ್ನುವುದು ಸೆಕ್ಸ್ ನ ಪರ್ಯಾಯವಲ್ಲ. ಇದು ಪರಸ್ಪರರನ್ನು ಅರಿಯುವ, ಮನಸ್ಸು ಬಿಚ್ಚಿ ಒಬ್ಬರಿಗೊಬ್ಬರು ಹೇಳಿಕೊಳ್ಳುವ ಸೌಹಾರ್ದಯುತ ವೇದಿಕೆಯಾಗಲಿ. ಮನಸ್ಸಿನ ಮಾತುಗಳಿಗೆ ಹೆಚ್ಚು ಒತ್ತು ಕೊಡಿ. ದೇಹ ಭಾಷೆಗಲ್ಲ!

ಇದನ್ನೂ ಓದಿ.. ಕೇವಲ 5 ರೂ. ಗಾಗಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ