ನೀವು ಮಾಡುವ ಈ ತಪ್ಪುಗಳು ಕೂದಲುದುರುವ ಸಮಸ್ಯೆಗೆ ಕಾರಣವಾಗಬಹುದು ಎಚ್ಚರ
ಗುರುವಾರ, 9 ಮೇ 2019 (08:13 IST)
ಬೆಂಗಳೂರು : ಕೂದಲು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೂದಲುದುರುವ ಸಮಸ್ಯೆ ನಮ್ಮನ್ನು ಚಿಂತೆಗೀಡು ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು.
*ಬಿಸಿ ನೀರಿನಲ್ಲಿ ತಲೆಸ್ನಾನ ಮಾಡಿದರೆ ಕೂದಲಿನ ಬುಡ ಒಣಗುವುದು, ಇದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.
*ಮಾನಸಿಕ ಒತ್ತಡ ಅಧಿಕವಾದಂತೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು, ಜತೆಗೆ ಕೂದಲು ಉದುರಲಾರಂಭಿಸುವುದು.
*ಧೂಳು ಇರುವ ಪ್ರದೇಶದಲ್ಲಿ ಓಡಾಡುವವರು ವಾರಕ್ಕೊಮ್ಮೆ ತಲೆಸ್ನಾನ ಮಾಡದರೆ ಕೂದಲುದುರುವ ಸಮಸ್ಯೆ ಕಾಡುತ್ತದೆ. ಆದ್ದರಂದ ವಾರದಲ್ಲಿ 2-3 ಬಾರಿ ತಲೆ ಸ್ನಾನ ಮಾಡಿ.
*ಕೂದಲಿಗೆ ಐರನ್ ಹಾಕುವುದು, ಸ್ಟ್ರೈಟ್ನರ್, ಡ್ರೈಯರ್ ಬಳಸುವುದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ