ಡ್ರೈ ಪ್ರೂಟ್ಸ್ ನಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಹೇಗೆ ಗೊತ್ತಾ?

ಗುರುವಾರ, 4 ಏಪ್ರಿಲ್ 2019 (16:15 IST)
ಬೆಂಗಳೂರು : ಡ್ರೈ ಪ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಇದರಿಂದ ನಿಮ್ಮ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.


ಹೌದು. ಡ್ರೈ ಪ್ರೂಟ್ಸ್ ಗಳನ್ನು ನಿಯಮಿತವಾಗಿ ಸೇವಿಸಿದರೆ ಅದರಿಂದ ತೂಕ ಇಳಿಸಿಕೊಳ್ಳಬಹುದು. ಬಾದಾಮಿಯಲ್ಲಿ ವಿಟಮಿನ್ ಇ ಇರುವ ಕಾರಣದಿಂದಾಗಿ ಇದು ಚರ್ಮಕ್ಕೆ ಯಾವಾಗಲೂ ತೇವಾಂಶ ನೀಡುವುದು. ಮೊದಲು ಕೆಲವು ಬಾದಾಮಿಯನ್ನು ರಾತ್ರಿ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಮೊದಲಿಗೆ ಬಾದಾಮಿಯ ಸಿಪ್ಪೆ ತೆಗೆದು, ಇದರ ಬಳಿಕ ಅದನ್ನು ಬಾಳೆಹಣ್ಣಿನ ಜತೆಗೆ ಸೇರಿಸಿಕೊಂಡು ರುಬ್ಬಿಕೊಂಡು ಪೇಸ್ಟ್ ಮಾಡಬೇಕು. 4-5 ನಿಮಿಷ ಕಾಲ ಈ ಮಿಶ್ರಣ ಬಳಸಿಕೊಂಡು ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಬಳಿಕ ನೀವು ಮುಖವನ್ನು ತಣ್ಣಗಿನ ನೀರಿನಿಂದ ತೊಳೆಯಿರಿ. ಚರ್ಮದ ಸತ್ತಕೋಶವನ್ನು ಇದು ತೆಗೆಯುವುದು ಮತ್ತು ಚರ್ಮದಲ್ಲಿನ ಧೂಳು ಹಾಗೂ ಕಲ್ಮಷ ನಿವಾರಣೆ ಮಾಡಿ ಮುಖಕ್ಕೆ ಕಾಂತಿ ನೀಡುವುದು.



ನಾಲ್ಕು ವಾಲ್ ನಟ್ ನ್ನು ರುಬ್ಬಿಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಮಾಸ್ಕ್ ಹಾಕಿ ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಫ್ರಿಡ್ಜ್ ನಲ್ಲಿಟ್ಟಿರುವ ನೀರಿನಿಂದ ಮುಖ ತೊಳೆಯಿರಿ. ಇದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುವುದು ಮತ್ತು ವಯಸ್ಸಾಗುವಂತಹ ಲಕ್ಷಣಗಳು ಬರದಂತೆ ತಡೆಯುವುದು


ಚರ್ಮದಲ್ಲಿರುವಂತಹ ವಿಷಕಾರಿ ಅಂಶವನ್ನು ತೆಗೆದುಹಾಕಲು ನೀವು ಒಣದ್ರಾಕ್ಷಿಯನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಕೆಲವು ಒಣದ್ರಾಕ್ಷಿಯನ್ನು ಪೇಸ್ಟ್ ಮಾಡಿಕೊಂಡು, ಅದಕ್ಕೆ ಸ್ವಲ್ಪ ಹಾಲು ಹಾಕಿ. ಈ ಫೇಸ್ಟ್ ನಿಂದ ಮುಖಕ್ಕೆ ಕೆಲವು ನಿಮಿಷ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಬಳಿಕ ನೀವು ಮುಖವನ್ನು ನೀರಿನಿಂದ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ