ಈ ಕಾರಣದಿಂದ ಗಂಡನೊಂದಿಗೆ ನಾನು ಇನ್ನೂ ಲೈಂಗಿಕ ಸಂಬಂಧ ಹೊಂದಿಲ್ಲ

ಬುಧವಾರ, 9 ಅಕ್ಟೋಬರ್ 2019 (10:01 IST)
ಬೆಂಗಳೂರು : ಪ್ರಶ್ನೆ : ನನಗೆ 31 ವರ್ಷ. ಮದುವೆಯಾಗಿ ಒಂದು ವರ್ಷವಾಗಿದೆ. ನನ್ನ ಗಂಡನೊಂದಿಗೆ ನಾನು ಇನ್ನೂ ಲೈಂಗಿಕ ಸಂಬಂಧ ಹೊಂದಿಲ್ಲ. ಏಕೆಂದರೆ ಅದು ನೋವಿನಿಂದ ಕೂಡಿದೆ ಎಂದು ನಾನು ಭಾವಿಸುತ್ತೇನೆ. ಈ ಬಗ್ಗೆ ಸ್ತ್ರೀರೋಗ ತಜ್ಞರಲ್ಲಿ ಚರ್ಚಿಸಲು ನನಗೆ ಮುಜುಗರವಾಗುತ್ತಿದೆ. ನನ್ನ ಭಯವನ್ನು ನಿವಾರಿಸಲು ಹಾಗೂ ಲೈಂಗಿಕ ಜೀವನವನ್ನು ಸುಧಾರಿಸಲು ನಾನು ಏನು ಮಾಡಲಿ?
ಉತ್ತರ : ನೀವು ಏಕೆ ಹೆದರುತ್ತಿದ್ದೀರಿ? ನೋವು ಕೆಲವು ನಿಮಿಷಗಳವರೆಗೆ ಇರುತ್ತದೆ ಮತ್ತು ಮುಟ್ಟಿನ ಸಮಯದಲ್ಲಿ ನೀವು ಅನುಭವಿಸುವುದಕ್ಕಿಂತ ಹೆಚ್ಚಿಲ್ಲ. ಶಿಶ್ನ ನುಗ್ಗುವ ಭಯ ಸ್ನಾಯುವಿನ ಸಂಕೋಚನಕ್ಕೆ ಕಾರಣವಾಗುತ್ತದೆ. ಮತ್ತು ಈ ಸ್ಥಿತಿಯನ್ನು ಯೋನಿಸ್ಮಸ್ ಎಂದು ಕರೆಯಲಾಗುತ್ತದೆ. ನಿಮಗೆ ಮಾರ್ಗದರ್ಶನ ನೀಡಲು ಲೈಂಗಿಕ ತಜ್ಞರು ಅಥವಾ ಸ್ತ್ರೀರೋಗ ತಜ್ಞರನ್ನು  ಭೇಟಿ  ಮಾಡಿ. ಸರಿಯಾದ ಔಷಧಗಳ ಮೂಲಕ ನೋವನ್ನು ಗುಣಪಡಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ