ಬಾದಾಮಿ ಹಾಲು ಸೇವಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಈ ಲಾಭ ಗ್ಯಾರಂಟಿ

ಶುಕ್ರವಾರ, 23 ನವೆಂಬರ್ 2018 (09:18 IST)
ಬೆಂಗಳೂರು: ಪ್ರತಿ ನಿತ್ಯ ಬಾದಾಮಿ ಹಾಲು ಸೇವಿಸುತ್ತಿದ್ದೀರಾ? ಹಾಗಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಎಂಥಾ ಪರಿಣಾಮ ಬೀರುತ್ತದೆ ನೋಡಿ.

ಕೊಬ್ಬಿನಂಶ ಇಲ್ಲ
ಇತರ ಹಾಲಿನಂತೆ ಬಾದಾಮಿ ಹಾಲಿನಲ್ಲಿ ಶರೀರಕ್ಕೆ ಬೇಡದ ಕೊಬ್ಬಿನಂಶ ಇರಲ್ಲ. ಹೀಗಾಗಿ ಇದನ್ನು ಕೊಲೆಸ್ಟ್ರಾಲ್ ಸಮಸ್ಯೆ ಇರುವವರೂ ಧಾರಾಳವಾಗಿ ಸೇವಿಸಬಹುದು.

ಡಯಟ್ ಮಾಡುವವರು
ತೂಕ ಇಳಿಸಿಕೊಳ್ಳಲು ಡಯಟ್ ಮಾಡುವವರೂ ಈ ಹಾಲನ್ನು ಸೇವಿಸಬಹುದು. ಇದರಲ್ಲಿ ಒಂದು ಲೋಟ ಹಾಲಿನಲ್ಲಿ 30-40 ಕ್ಯಾಲೋರಿ ಇರುತ್ತದಷ್ಟೇ.

ಅಧಿಕ ಪೋಷಕಾಂಶ
ಬಾದಾಮಿಯಲ್ಲಿ ಹೇರಳವಾಗಿ ವಿಟಮಿನ್ ಎ, ವಿಟಮಿನ್ ಡಿ ಮತ್ತು ಕ್ಯಾಲ್ಶಿಯಂನಂತಹ ಪೋಷಕಾಂಶಗಳಿದ್ದು, ಇದು ಕಣ್ಣು, ಚರ್ಮ, ಕೂದಲುಗಳ ಬೆಳವಣಿಗೆಗೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ