ದಿನಾ ಒಂದು ಲೋಟ ಜೀರಿಗೆ ನೀರು ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಶುಕ್ರವಾರ, 25 ಮೇ 2018 (14:00 IST)
ಬೆಂಗಳೂರು: ಜೀರಿಗೆಯ ನೀರಿನಲ್ಲಿ ಹಲವಾರು ಪೋಷಕಾಂಶಗಳಿವೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ತೂಕ ಕೂಡ ಇಳಿಯುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.  ಜೀರಿಗೆ ನೀರು ಸೇವಿಸುವುದರಿಂದ ಏನೆಲ್ಲಾ ಉಪಯೋಗವಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ನಿದ್ರಾಹೀನತೆ : ಜೀರಿಗೆ ನೀರು ಸೇವನೆಯಿಂದ ಬ್ರೈನ್‌ ರಿಲ್ಯಾಕ್ಸ್‌ ಆಗುತ್ತದೆ. ಅಲ್ಲದೆ ನಿದ್ರೆ ಚೆನ್ನಾಗಿ ಬರಲು ಇದು ಸಹಕಾರಿಯಾಗಿದೆ.

ಜ್ವರ : ಇದಕ್ಕೆ ಜ್ವರವನ್ನು ಸಹ ನಿವಾರಣೆ ಮಾಡುವ ಶಕ್ತಿ ಇದೆ. ಜೀರಿಗೆ ನೀರನ್ನು ಕುಡಿಯೋದರಿಂದ ದೇಹ ತಂಪಾಗುತ್ತದೆ. ಇದರಿಂದ ಜ್ವರ ಕಡಿಮೆಯಾಗುತ್ತದೆ.

ರಕ್ತದೊತ್ತಡ ಕಡಿಮೆ:ಜೀರಿಗೆಯಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತದಲ್ಲಿ ನೀರಿನ ಪ್ರಮಾಣ ಮತ್ತು ಎಲೆಕ್ಟ್ರೋಲೈಟುಗಳ ಪ್ರಮಾಣವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಇದರಿಂದ ರಕ್ತದ ಒತ್ತಡ ಏಕಪ್ರಕಾರವಾಗಿರುತ್ತದೆ.

ತೂಕ ಇಳಿಕೆ:ತೂಕವಿಳಿಸಲು ನೆರವು ತೂಕವಿಳಿಸಲು ಈ ನೀರು ಒಂದು ಉತ್ತಮ ಮಾಧ್ಯಮವಾಗಿದೆ. ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಹೆಚ್ಚು ಕ್ಯಾಲೋರಿಗಳು ಬಳಸಲ್ಪಡುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹಸಿವನ್ನು ಕಡಿಮೆಗೊಳಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ