ಮುಖದ ಕೋಮತೆಗೆ ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್

ಮಂಗಳವಾರ, 8 ಮೇ 2018 (15:13 IST)
ಬೆಂಗಳೂರು: ಬೇಸಿಗೆಯಲ್ಲಿ ಮುಖದ ಅಂದ ಹೇಗೆ ಕಾಪಾಡಿಕೊಳ್ಳುವುದು ಎಂಬುದೇ ಹುಡುಗಿಯರನ್ನು ಕಾಡುವ ಬಹುದೊಡ್ಡ ಸಮಸ್ಯೆ. ಒಂದು ವೇಳೆ ಸೂಕ್ತ ಆರೈಕೆ ಮತ್ತು ರಕ್ಷಣೆ ನೀಡದೇ ಹೋದರೆ ಚರ್ಮ ಕಪ್ಪಗಾಗುವುದು ಹಾಗೂ ಇತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಕಿತ್ತಳೆಯಲ್ಲಿ ನೀರಿನ ಪ್ರಮಾನ ಹೆಚ್ಚಿರುವುದರಿಂದ ಚರ್ಮಕ್ಕ ಬೇಕಾದ ಆರ್ದ್ರತೆಯನ್ನು ಒದಗಿಸುತ್ತದೆ.  ಇದರಲ್ಲಿ ವಿಟಮಿನ್ ಸಿ ಇರುವ ಕಾರಣ ಇದು ನೈಸರ್ಗಿಕ ಸನ್ ಸ್ಕ್ರೀನ್ ನಂತೆ ಕೆಲಸ ನಿರ್ವಹಿಸಿ ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ.


ಫೇಸ್ ಪ್ಯಾಕ್ ಗೆ ಅಗತ್ಯವಿರುವ ಸಾಮಾಗ್ರಿಗಳು
*4ಕಿತ್ತಳೆಯ ತೊಳೆಗಳು
*2 ಚಿಕ್ಕ ಚಮಚ ಕಡಲೆಹಿಟ್ಟು
*2 ಚಿಕ್ಕ ಚಮಚ ಮೊಸರು

* ಮಿಕ್ಸಿಯಲ್ಲಿ ಮೊದಲು ಕಡ್ಲೆ ಹಿಟ್ಟು ಹಾಕಿ ನಂತರ ಕಿತ್ತಳೆ ತೊಳೆಗಳನ್ನು ಹಾಕಿ ತದನಂತರ  ಮೊಸರು ಸೇರಿಸಿ. ಎಲ್ಲವೂ ಸರಿಯಾಗಿ ಮಿಶ್ರಣವಾಗುವಂತೆ ಕಡೆಯಿರಿ. ನುಣುಪಾದ ೀ ಮಿಶ್ರಣವನ್ನು ಮುಖಕ್ಕೆ ಲೇಪಿಸಿಕೊಂಡು 10 ನಿಮಿಷ ಬಿಟ್ಟು ತಣ್ಣಗಿನ ನೀರಿನಿಂದ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ