ಕಾಲೇಜ್ ಕನ್ಯೆಯೊಂದಿಗೆ ಮಲಗಿ ಕನಸು ಕಂಡವನಿಗೆ ಬಿಗ್ ಶಾಕ್

ಮಂಗಳವಾರ, 18 ಫೆಬ್ರವರಿ 2020 (14:10 IST)
ಪ್ರಶ್ನೆನನ್ನ ಪತ್ನಿ ನನ್ನ ಜೊತೆಗೆ ಜಗಳ ಮಾಡಿಕೊಂಡು ತವರು ಮನೆ ಸೇರಿ ಈಗ ಆರು ತಿಂಗಳು ಆಗಿವೆ. ನನ್ನ ವಯಸ್ಸು 33. ಇನ್ನೂ ಮಕ್ಕಳಾಗಿಲ್ಲ. ತವರಿಗೆ ಹೋಗಿರುವ ಪತ್ನಿ ಎಷ್ಟೇ ಕರೆದೂ ಮನೆಗೆ ಬರುತ್ತಿಲ್ಲ. ಪತ್ನಿ ದೂರವಾಗಿರುವ ಕಾರಣ ಒಬ್ಬಳು ಯುವತಿಯೊಂದಿಗೆ ಪ್ರೀತಿಯಲ್ಲಿದ್ದೇನೆ. ಅವಳು ನರ್ಸಿಂಗ್ ಓದುತ್ತಿದ್ದಾಳೆ.

ಆದರೆ ಅವಳು ನನ್ನ ಜತೆ ಬಂದು ಸುಖಿಸಿ ಹೋದಾಗಲೆಲ್ಲಾ ನನ್ನ ಕಡೆಯಿಂದ ಏನಾದರೂ ಕಾರಣ ಹೇಳಿ ಹಣ ಕೇಳುತ್ತಿದ್ದಾಳೆ. ಅವಳು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದರೆ ಹಣ ಏಕೆ ಕೇಳುತ್ತಿದ್ದಳು. ನಾನು ಅವಳನ್ನು ಪರೀಕ್ಷಿಸಿ ಕೆಲವೊಂದು ಬಾರಿ ಬೆನ್ನು ಹತ್ತಿದಾಗ ಗೊತ್ತಾಗಿದ್ದು ಅವಳು ಪಾರ್ಟ್ ಟೈಮ್ ಕಾಲ್ ಗರ್ಲ್ ಅಂತ. ಪತ್ನಿ ಇಲ್ಲದ ವೇಳೆ ಇವಳೊಂದಿಗೆ ಅಪಾರ ಕನಸು ಕಂಡಿದ್ದೆ. ಆದರೆ ಆಗಿದ್ದೇ ಬೇರೆ… ಈಗ ಮುಂದೇನು ಎನ್ನೋದೇ ಚಿಂತೆಯಾಗಿದೆ.

ಉತ್ತರ: ನಿಮ್ಮ ಪತ್ನಿ ಯಾವ ಕಾರಣಕ್ಕೆ ನಿಮ್ಮಿಂದ ದೂರವಾಗಿದ್ದಾಳೆ ಎನ್ನೋದು ಸ್ಪಷ್ಟವಾಗಿ ಬರೆದಿಲ್ಲ. ಮೊದಲು ನಿಮ್ಮ ಪತ್ನಿಯನ್ನು ಮನೆಗೆ ಕರೆತರುವ ದಾರಿಯನ್ನು ಕಂಡುಕೊಳ್ಳಿ. ಹೀಗೆ ಪತ್ನಿ ಇಲ್ಲದ ವೇಳೆ ನೀವು ನಡೆದುಕೊಂಡಿದ್ದು ತಪ್ಪು.

ಕೆಲವು ಕಾಲ್ ಗರ್ಲ್ ಗಳು ಹೀಗೇ ಬಹಳಷ್ಟು ಜನರನ್ನು ವಂಚನೆ ಮಾಡುತ್ತಾರೆ. ಅದರಲ್ಲೂ ಒಂಟಿ ಪುರುಷ ಹಾಗೂ ಸ್ಥಿತಿವಂತರನ್ನು ಟಾರ್ಗೆಟ್ ಮಾಡಿ ಹಣ ಪೀಕುತ್ತಾರೆ. ಮುಂದೆ ಬೇರೆ ಹೆಣ್ಣಿನ ಸಹವಾಸಕ್ಕೆ ಹೋಗಬೇಡಿ. ಪತ್ನಿಯೊಂದಿಗೆ ಸುಖಮಯ ಜೀವನ ನಡೆಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ