ದೇಹದ ತೂಕ ಕಡಿಮೆಯಾದರು ತೊಡೆಯ ಭಾಗ ಇನ್ನೂ ದಪ್ಪಗೆ ಕಾಣುತ್ತಿದೆಯೇ?

ಮಂಗಳವಾರ, 14 ಡಿಸೆಂಬರ್ 2021 (10:22 IST)
ತೂಕದಿಂದ ಫಿಟ್ ಆಗಿಲ್ಲ ಎಂಬುವುದು ಕೆಲವರಿಗೆ ಚಿಂತೆಯಾದರೆ, ಇನ್ನು ಕೆಲವರಿಗೆ ನೋಡಲು ಸುಂದರವಾಗಿ ಕಾಣಿಸುತ್ತಿಲ್ಲಾ ಎಂಬ ಚಿಂತೆ.

ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಮತ್ತು ಆಹಾರದಲ್ಲಿನ ಕೆಲವು ಬದಲಾವಣೆಗಳು ತೂಕ ನಷ್ಟಕ್ಕೆ ಸಹಾಯಕಾರಿ ಎಂದು ತಜ್ಞರು ಹೇಳುತ್ತಾರೆ.

ವ್ಯಾಯಾಮಗಳು
ನಿಮ್ಮ ತೊಡೆಯ ಊತವನ್ನು ನೀವು ಕಡಿಮೆ ಮಾಡಲು ವ್ಯಾಯಾಮದ ಮೊರೆ ಹೋಗಿ. ದಪ್ಪವಾದ ತೊಡೆಯಿರುವ ಪುರುಷರು ಮತ್ತು ಮಹಿಳೆಯರು, ಮೊದಲು ನಿಮಗೆ ಸೀಮಿತವಾಗಿರುವ ಸಮಯದಲ್ಲಿ ಯಾವ ವ್ಯಾಯಾಮ ಮಾಡಬಹುದು ಎಂಬುವುದನ್ನು ತಿಳಿಯಿರಿ.
ಸೀಸರ್ ಲೆಗ್ಸ್ ಪ್ಲ್ಯಾಂಕ್

ಈ ವ್ಯಾಯಾಮವನ್ನು ಮಾಡಲು ಮೊದಲು ನೀವು ನಿಮ್ಮ ಪಾದಗಳನ್ನು ನೇರವಾಗಿಸಿ. ಬಳಿಕ ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ ಕಾಲುಗಳನ್ನು ಅಗಲವಾಗಿಸಿ. ನಂತರ ಮುಂದಕ್ಕೆ ನೋಡುತ್ತ ಒಂದು ಕಾಲನ್ನು ಎತ್ತಿ. ಹೀಗೆ ನಿರಂತರವಾಗಿ ದಿನಕ್ಕೆ 5 ನಿಮಿಷ ಮಾಡುವುದರಿಂದ ತೊಡೆ ಭಾಗದ ತೂಕ ಕಡಿಮೆಯಾಗುತ್ತದೆ.
ಸ್ಕ್ವೀಝ್ ಮತ್ತು ಲಿಫ್ಟ್

ನಿಮ್ಮ ಕಾಲುಗಳ ನಡುವೆ ಚೆಂಡನ್ನು ಇರಿಸಿ ಮತ್ತು ನೇರವಾಗಿ ನೆಲದ ಮೇಲೆ ಮಲಗಿ. ಬಳಿಕ ನಿಧಾನವಾಗಿ ಕಾಲನ್ನು ಮೇಲಕ್ಕೆ ಎತ್ತುತ್ತ ಒಂದು ಬದಿಗೆ ಒರೆಯಾಗಿಸಿ. ತೊಡೆಯ ಭಾಗಕ್ಕೆ ಹೆಚ್ಚು ಬಲವನ್ನು ಬಿಡಿ. ಇದು ನಿಮ್ಮ ದೇಹಕ್ಕೆ ಉತ್ತಮ ಆಕಾರ ನೀಡಲು ಸಹಾಯ ಮಾಡುತ್ತದೆ.
ಬಾರ್ಬೆಲ್ ಸ್ಕ್ವಾಟ್

ಈ ವ್ಯಾಯಾಮವು ನಿಮ್ಮ ತೊಡೆಗಳನ್ನು ಗುರಿಯಾಗಿಸುವ ಜತೆಗೆ ಸ್ನಾಯುಗಳ ಮೇಲೆಯೂ ಪರಿಣಾಮ ಬೀರುತ್ತದೆ. ನಿಮ್ಮ ಭುಜದ ಮೇಲೆ ಬಾರ್ಬೆಲ್ ಅನ್ನು ಹಿಡಿದುಕೊಳ್ಳಿ. ಬಳಿಕ ನಿಧಾನವಾಗಿ ಕುಳಿತಲ್ಲಿಂದ ಮೇಲಕ್ಕೆ ಏಳಿ. ಹೀಗೆ ಸ್ವಲ್ಪ ಸಮಯದವರೆಗೆ ಮಾಡುವುದರಿಂದ ತೊಡೆಯ ತೂಕ ಕಡಿಮೆಯಾಗುತ್ತದೆ.
ಲಂಗ್ಸ್

ತೊಡೆಯ ಕೊಬ್ಬನ್ನು ಕಡಿಮೆ ಮಾಡಲು ಇದು ಒಂದು ಶ್ರೇಷ್ಠ ಹಂತವಾಗಿದೆ. ಕಾಲನ್ನು ಅಗಲವಾಗಿಸಿ. ನಂತರ ಸೊಂಟದ ಮೇಲೆ ಕೈಗಳನ್ನು ಇರಿಸಿ. ಹೆಜ್ಜೆಯನ್ನು ಮುಂದಕ್ಕೆ ಚಾಚಿ. ಹೀಗೆ ನಿರಂತರವಾಗಿ ಮಾಡುವುದರಿಂದ ತೂಕ ಆದಷ್ಟು ಬೇಗ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ