ಬೆಂಗಳೂರು: ಕೆಲವು ಮಹಿಳೆಯರು ಇಂತಹ ವಿಚಾರವನ್ನು ಹೊರಗೆ ಹೇಳಲೂ ಆಗದೇ ಅನುಭವಿಸಲೂ ಆಗದೇ ಹಿಂಸೆ ಅನುಭವಿಸುತ್ತಿರುತ್ತಾರೆ.
ಪತಿಯ ಸಹೋದರ ಅಥವಾ ತಂದೆಯಿಂದ ಲೈಂಗಿಕ ಕಿರುಕುಳ ವಿಚಾರವನ್ನು ಯಾರಲ್ಲಾದರೂ ಹೇಳಿಕೊಂಡರೆ ಎಲ್ಲಿ ತಮ್ಮ ವೈವಾಹಿಕ ಬದುಕು ಮುರಿದುಬೀಳುತ್ತದೋ ಎಂಬ ಭಯಕ್ಕೆ ಮೌನವಾಗಿ ಹಿಂಸೆ ಅನುಭವಿಸುತ್ತಾರೆ. ಆದರೆ ಇದು ತಪ್ಪು.
ಅದರ ಬದಲು ಇಂತಹ ಹಿಂಸೆಯನ್ನು ಧೈರ್ಯವಾಗಿ ಎದುರಿಸಲು ಕಲಿಯಬೇಕು. ಮೈದುನನ ವರ್ತನೆ ಬಗ್ಗೆ ಗಂಡನ ಜತೆ ಹೇಳುವ ಮೊದಲು ನೀವೇ ನಿಮ್ಮ ಸುತ್ತ ಆತನಿಗೆ ಒಂದು ಬೇಲಿ ಹಾಕಿಕೊಳ್ಳಿ. ಆತ ನಿಮ್ಮ ಬಳಿ ಬರಲು ನೋಡಿದರೆ, ನಿಮ್ಮ ಜತೆ ಸುತ್ತಾಡಲು ಬರುತ್ತೇನೆ ಎಂದರೆ ನೇರವಾಗಿ ಖಡಕ್ ಆಗಿ ಬೇಡ, ಎಂದು ನಿರಾಕರಿಸಿ. ನೀವು ಭಯಪಡುತ್ತಾ ಕೂತರೆ ಆತನಿಗೂ ಧೈರ್ಯ ಹೆಚ್ಚಬಹುದು.
ಬಳಿಕವಷ್ಟೇ ನಿಮ್ಮ ಗಂಡನಿಗೂ ನಿಧಾನವಾಗಿ ಈ ಬಗ್ಗೆ ತಿಳಿಸಿ ಹೇಳಿ. ಆತನ ವರ್ತನೆ ಸರಿ ಇಲ್ಲ ಎಂದು ದೂರುವಂತೆ ಹೇಳುವ ಬದಲು ನಿಮ್ಮ ಸಮಸ್ಯೆ ಹೇಳಿಕೊಳ್ಳಿ. ನಿಮಗಾಗುವ ಕಿರಿ ಕಿರಿಯನ್ನು ಗಂಡನ ಜತೆ ಮುಚ್ಚು ಮರೆಯಿಲ್ಲದೇ ಹೇಳಿ. ನೆನಪಿಡಿ, ಬಗ್ಗಿದವನಿಗೆ ಯಾವತ್ತೂ ಒಂದು ಗುದ್ದು ಜಾಸ್ತಿ. ಹಾಗಾಗಿ ಇಂತಹ ಹಿಂಸೆಯನ್ನು ಮೌನವಾಗಿ ಎದುರಿಸುವ ಬದಲು ನೇರವಾಗಿ ಎದುರಿಸಲು ಕಲಿಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ