ಬೇರೆ ಹುಡುಗಿ ಸಹವಾಸ ಮಾಡಿ ತಪ್ಪೊಪ್ಪಿಕೊಂಡ ಗಂಡನ ಕ್ಷಮಿಸಬೇಕೇ?

ಶುಕ್ರವಾರ, 22 ಮಾರ್ಚ್ 2019 (11:47 IST)
ಬೆಂಗಳೂರು: ಕೆಲವರು ಮನೆಯೊಳಗಿರುವ ಹೆಂಡತಿಯಿಂದ ಕದ್ದು ಮುಚ್ಚಿ ಬೇರೊಂದು ಹುಡುಗಿ ಜತೆ ಚೆಲ್ಲಾಟವಾಡುತ್ತಾರೆ. ಆದರೆ ಅಕಸ್ಮಾತ್ತಾಗಿಯೋ, ಗೊತ್ತಿದ್ದೋ ಬೇರೆ ಹುಡುಗಿ ಸಹವಾಸ ಮಾಡಿ ಕೊನೆಗೆ ತಪ್ಪೊಪ್ಪಿಕೊಳ್ಳುವ ಗಂಡನನ್ನು ಕ್ಷಮಿಸಬೇಕೇ?


ಹೀಗೊಂದು ಗೊಂದಲ ಪತ್ನಿಗೆ ಕಾಡಬಹುದು. ಯಾವುದೇ ಪತ್ನಿಯೂ ಪತಿಯನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳಲು ಇಷ್ಟಪಡಲ್ಲ. ಅಂತಹದ್ದೊಂದು ವಿಚಾರವನ್ನು ನೆನೆಸಿಕೊಳ್ಳುವುದೂ ಆಕೆಗೆ ಇಷ್ಟವಾಗಲ್ಲ. ಹಾಗಿರುವಾಗ ಗಂಡ ಬಂದು ತಪ್ಪೊಪ್ಪಿಕೊಂಡಾಗ ತಕ್ಷಣವೇ ಮರೆತು ಸ್ವೀಕರಿಸುವುದು ಕಷ್ಟವೇ.

ತಪ್ಪು ಏನೇ ಆದರೂ ತಪ್ಪೇ. ಹಾಗಾಗಿ ನನಗೆ ನೀವು ಮಾಡಿದ್ದು ಇಷ್ಟವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿ. ಆದರೆ ಮಾತು ಬಿಟ್ಟು, ಸತ್ಯಾಗ್ರಹ ಮಾಡಿ ಪ್ರಯೋಜನವಿಲ್ಲ. ಆತನಿಗೆ ಇದರಿಂದ ತಮ್ಮ ಸಂಸಾರ, ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಮನವರಿಕೆ ಮಾಡಿ. ಇನ್ನು ಮುಂದೆ ಇಂತಹ ತಪ್ಪು ಮಾಡಿದರೆ ಪರಿಣಾಮ ಘೋರವಾಗಿರುತ್ತದೆ ಎಂದು ಎಚ್ಚರಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ