ದನದ ಹಾಲು v/s ಎಮ್ಮೆ ಹಾಲು: ಯಾವುದು ಉತ್ತಮ?

ಶುಕ್ರವಾರ, 1 ಸೆಪ್ಟಂಬರ್ 2017 (08:31 IST)
ಬೆಂಗಳೂರು: ಸಾಮಾನ್ಯವಾಗಿ ನಾವು ಸೇವಿಸುವುದು ದನದ ಹಾಲೇ ಆದರೂ ಕೆಲವರು ಎಮ್ಮೆ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಹಾಗಿದ್ದರೆ ಯಾವ ಹಾಲು ನಮಗೆ ಒಳ್ಳೆಯದು?

 
·   ದನದ ಹಾಲಿನಲ್ಲಿ ಎಮ್ಮೆ ಹಾಲಿಗೆ ಹೋಲಿಸಿದರೆ ಕೊಬ್ಬಿನಂಶ ಕಡಿಮೆ. ಹೀಗಾಗಿ ದನದ ಹಾಲು ಬೇಗನೇ ಜೀರ್ಣವಾಗಬಲ್ಲದು.
·   ದನದ ಹಾಲಿಗಿಂತ ಹೆಚ್ಚು ಎಮ್ಮೆ ಹಾಲಿನಲ್ಲಿ ಕೆನೆ ಬರುವುದು. ಹಾಗಾಗಿ ಮೊಸರು, ಪನೀರ್, ಕುಲ್ಫೀ ಹಾಗೂ ತುಪ್ಪ ಮಾಡಲು ಎಮ್ಮೆ ಹಾಲನ್ನು ಬಳಸುತ್ತಾರೆ.
·   ದನದ ಹಾಲನ್ನು 1 ದಿನದೊಳಗೆ ಉಪಯೋಗಿಸಬೇಕು. ಆದರೆ ಎಮ್ಮೆ ಹಾಲನ್ನು ಎರಡು, ಮೂರು ದಿನ ಶೇಖರಿಸಿಡಬಹುದು. ಬೇಗನೇ ಹಾಳಾಗುವುದಿಲ್ಲ.
·    ಎಮ್ಮೆ ಹಾಲಿನಲ್ಲಿ ಪೋಷಕಾಂಶಗಳು ಜಾಸ್ತಿ. ಹಾಗಾಗಿ ಇದು ಬೇಗನೇ ಜೀರ್ಣವಾಗುವುದಿಲ್ಲ.
·    ಎಮ್ಮೆ ಹಾಲಿನಲ್ಲಿ ಕ್ಯಾಲ್ಶಿಯಂ ಅಂಶ ಜಾಸ್ತಿ. ದನದ ಹಾಲಿನಲ್ಲಿರುವ ಪೋಷಕಾಂಶಗಳಿಗೆ ಹೋಲಿಸಿದರೆ ಎಮ್ಮೆ ಹಾಲಿನಲ್ಲಿ ಕೊಬ್ಬಿನಂಶ ಜಾಸ್ತಿ.

ಇದನ್ನೂ ಓದಿ.. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಟಾಂಗ್ ಕೊಟ್ಟ ಅರ್ಜುನ್ ರಣತುಂಗಾ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ