ಧೂಮಪಾನ ಚಟವನ್ನು ಬಿಡಲು ಆಗುತ್ತಿಲ್ಲವೇ? ಹಾಗಾದ್ರೆ ಈ ಮನೆಮದ್ದನ್ನು ಬಳಸಿ
ಗುರುವಾರ, 10 ಜನವರಿ 2019 (07:43 IST)
ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೂಡ ಕೆಲವರು ಅದಕ್ಕೆ ಅಡಿಕ್ಟ್ ಆಗಿರುತ್ತಾರೆ. ನಂತರ ಅವರು ಅದನ್ನು ಬಿಡಬೇಕೆಂದರೂ ಕೂಡ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ಮನೆಮದ್ದನ್ನು ಬಳಸಿದರೆ ಸುಲಭವಾಗಿ ಈ ಕೆಟ್ಟ ಚಟದಿಂದ ದೂರವಾಗಬಹುದು.
2 ಲೀ ನೀರಿಗೆ ಓಂಕಾಳು 250 ಗ್ರಾಂ ಹಾಕಿ ಚೆನ್ನಾಗಿ ಕುದಿಸಬೇಕು. ನೀರಿ 500ಎಂಎಲ್ ಆಗುವ ತನಕ ಕುದಿಸಬೇಕು. ನಂತರ ಅದನ್ನು ಸೋಸಿ ಸ್ಟೋರ್ ಮಾಡಿಟ್ಟುಕೊಳ್ಳಿ. ಈ ನೀರನ್ನು 2-3 ಟೆಬಲ್ ಚಮಚದಷ್ಟು ತೆಗೆದುಕೊಂಡು ದಿನಕ್ಕೆ 2-3 ಬಾರಿ ಕುಡಿಯಬೇಕು. ಒಂದು ವೇಳೆ ಧೂಮಪಾನ ಮಾಡಬೇಕು ಅನಿಸಿದಾಗ ದಿನಕ್ಕೆ 5 ಬಾರಿ ಕುಡಿಯಬಹುದು. ಅದಕ್ಕಿಂತ ಜಾಸ್ತಿ ಕುಡಿಯಬಾರದು.
ಇದನ್ನು 1 ವಾರ ಮಾಡಿದರೆ ಧೂಮಪಾನ ಚಟದಿಂದ ದೂರವಾಗಬಹುದು. ಆದರೆ ಈ ಮನೆಮದ್ದನ್ನು ಮಾಡುವವರು ದಿನಕ್ಕೆ 4ಲೀಟರ್ ನೀರು ಕುಡಿಯಲೇಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.